Site icon Suddi Belthangady

ಪುಂಜಾಲಕಟ್ಟೆ: ಸ.ಪ್ರ.ದ ಕಾಲೇಜಿನಲ್ಲಿ ಒಂದು ದಿನದ ಜೀವನ ಕೌಶಲ್ಯ ತರಬೇತಿ

ಪುಂಜಾಲಕಟ್ಟೆ: ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಂತರಿಕ ಗುಣಮಟ್ಟ ಭರವಸಾ ಕೋಶ, ರಾಷ್ಟ್ರೀಯ ಸೇವಾ ಯೋಜನೆ ಘಟಕ 1 ಮತ್ತು 2 ರೇಂಜರ್ ಮತ್ತು ರೋವರ್ ಹಾಗು ಭಾರತೀಯ ಯುವ ರೆಡ್ ಕ್ರಾಸ್ ಇದರ ಸಹಯೋಗದಲ್ಲಿ ನಿಮಾನ್ಸ್ ಬೆಂಗಳೂರು ಮತ್ತು ಯುವ ಸ್ಪಂದನ ದ.ಕ ಸಂಘಟಿಸಿದ “ಒಂದು ದಿನದ ಜೀವನ ಕೌಶಲ್ಯ ತರಬೇತಿ” ಕಾರ್ಯಕ್ರಮವನ್ನು ಮಾ.25ರಂದು ಹಮ್ಮಿಕೊಳ್ಳಲಾಗಿತ್ತು.

ಈ ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ಶ್ರೀಕಾಂತ್ ಜೀವನ ಕೌಶಲ್ಯ ತರಬೇತುದಾರರು ಮತ್ತು ಮೇಲ್ವಿಚಾರಕರು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಪುತ್ತೂರು ಮತ್ತು ಇನ್ನೋರ್ವ ಸಂಪನ್ಮೂಲ ವ್ಯಕ್ತಿಯಾಗಿ ಬೆಳ್ತಂಗಡಿ ಸ.ಪ್ರ.ದ.ಕಾಲೇಜಿನ ಸಹಾಯಕ ಪ್ರಾಧ್ಯಾಪಕರು, ವಾಣಿಜ್ಯ ವಿಭಾಗದ ಪ್ರೊ.ರಾಜೇಶ್ವರಿ ಎಚ್.ಎಸ್ ಇವರು ಆಗಮಿಸಿದ್ದರು.

ಈ ಕಾರ್ಯಕ್ರಮವನ್ನು ಸಂಪನ್ಮೂಲ ವ್ಯಕ್ತಿಯಾದ ಶ್ರೀಕಾಂತ್ ಇವರು ಉದ್ಘಾಟಿಸಿ ಉದ್ಘಾಟನಾ ನುಡಿಗಳನ್ನಾಡಿದರು. ಪ್ರೊ.ರಾಜೇಶ್ವರಿ ಏಚ್ ಎಸ್ ಇವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಮಾಧವ ಎಂ ಇವರು ವಹಿಸಿದ್ದರು.ಎಲ್ಲಾ ಘಟಕದ ಸ್ವಯಂ ಸೇವಕರಿಗೆ ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿ ನೀಡಲಾಯಿತು.

ಕಾರ್ಯಕ್ರಮದಲ್ಲಿ ಆಂತರಿಕ ಗುಣಮಟ್ಟ ಭರವಸಾ ಕೋಶದ ಸಂಚಾಲಕರಾದ ಡಾ.ಅವಿತಾ ಮರಿಯ ಕ್ವಾಡ್ರಸ್, ವಿದ್ಯಾರ್ಥಿ ಪ್ರತಿಭಾ ವೇದಿಕೆಯ ಸಂಚಾಲಕರಾದ ಡಾ.ವೈಶಾಲಿ ಯು., ರಾಷ್ಟ್ರೀಯ ಸೇವಾ ಯೋಜನೆಯ ಯೋಜನಾಧಿಕಾರಿಗಳಾದ ಪ್ರೊ.ಸಂತೋಷ್ ಪ್ರಭು ಹಾಗು ಪ್ರೊ.ಚಿತ್ರಾ ಪಡಿಯಾರ್, ರೆಡ್ ಕ್ರಾಸ್ ನ ಸಂಚಾಲಕರಾದ ಡಾ.ವೈಶಾಲಿ ಯು ಹಾಗು ಪ್ರೊ.ಶೇಖರ್ ಕೆ, ರೋವರ್ಸ್ ಮತ್ತು ರೇಂಜರ್ಸ್ ನ ಸಂಚಾಲಕ ಪ್ರೊ.ಆಂಜನೇಯ ಎಂ.ಎನ್ ಹಾಗು ಎಲ್ಲಾ ಬೋಧಕ, ಬೋಧಕೇತರ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ಈ ಕಾರ್ಯಕ್ರಮವನ್ನು ಕು.ಅಂಬಿಕಾ ಸ್ವಾಗತಿಸಿ, ಕು.ಹರಿಣಾಕ್ಷಿ ಧನ್ಯವಾದವಿತ್ತರು ಹಾಗು ದೀನಕೃಪಾ ನಿರೂಪಿಸಿದರು.

Exit mobile version