Site icon Suddi Belthangady

ದ.ಕ ಲೋಕಸಭಾ ಬಿಜೆಪಿ ಅಭ್ಯರ್ಥಿ ಕ್ಯಾ.ಬ್ರಿಜೇಶ್ ಚೌಟ ನಿಕಟ ಪೂರ್ವ ಪಂ. ಅಧ್ಯಕ್ಷ ಆನಂದ ಅಡಿಲು ರ ಮನೆಗೆ ಭೇಟಿ

ಬೆಳ್ತಂಗಡಿ: ತಾಲೂಕಿನ ವಿವಿಧ ಭಾಗಗಳಲ್ಲಿ ಲೋಕಸಭಾ ಚುನಾವಣೆಯ ಪ್ರವಾಸದಲ್ಲಿದ್ದ ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್ ಚೌಟ ರವರು, ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಚೇತರಿಸಿಕೊಂಡು ವಿಶ್ರಾಂತಿ ಪಡೆಯುತ್ತಿರುವ ಇಂದಬೆಟ್ಟು ಗ್ರಾಮ ಪಂಚಾಯತ್ ನಿಕಟಪೂರ್ವ ಅಧ್ಯಕ್ಷ ಬಿಜೆಪಿಯ ಹಿರಿಯ ಕಾರ್ಯಕರ್ತ ಆನಂದ ಅಡಿಲು ರವರ ಮನೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು.

ಈ ಸಂದರ್ಭದಲ್ಲಿ ಮಾನ್ಯ ಶಾಸಕ ಹರೀಶ್ ಪೂಂಜಾ, ಹರಿಕೃಷ್ಣ ಬಂಟ್ವಾಳ್, ಬೆಳ್ತಂಗಡಿ ಮಂಡಲದ ಅಧ್ಯಕ್ಷ ಶ್ರೀನಿವಾಸ ರಾವ್, ಜಯಂತ್ ಗೌಡ ಗುರಿಪಳ್ಳ, ಇಂದಬೆಟ್ಟು ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ಶ್ರೀಕಾಂತ್ ಎಸ್, ಬೂತ್ ಸಮಿತಿ ಅಧ್ಯಕ್ಷ ನವೀನ್ ಜೈನ್, ಕಾರ್ಯದರ್ಶಿ ಪ್ರತೀಶ್ ಕಡಿತ್ಯಾರು, ಪಳನಿ ಸ್ವಾಮಿ, ಸಂಜೀವ ಗೌಡ ಕುತ್ರಬೆಟ್ಟು, ಅಯೋಧ್ಯೆ ಅನಂದ ಗೌಡ ಬೆದ್ರಬೆಟ್ಟು, ಬಿಜೆಪಿ ಜಿಲ್ಲಾ ಹಾಗೂ ಮಂಡಲದ ಪದಾಧಿಕಾರಿಗಳು ಉಪಸ್ಥಿತರಿದ್ದರು.

Exit mobile version