Site icon Suddi Belthangady

ಕೊಲ್ಲಿ ಶ್ರೀ ದುರ್ಗಾಪರಮೇಶ್ವರಿ ದುರ್ಗಾದೇವಿ ದೇವಸ್ಥಾನದಲ್ಲಿ ಪುನ‌ರ್ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವ: ಧಾರ್ಮಿಕ ಸಭೆ

ಮಿತ್ತಬಾಗಿಲು: ಕೊಲ್ಲಿ ಶ್ರೀ ದುರ್ಗಾಪರಮೇಶ್ವರಿ, ಶ್ರೀ ದುರ್ಗಾದೇವಿ ದೇವಸ್ಥಾನದಲ್ಲಿ ಪುನ‌ರ್ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವದ ಅಂಗವಾಗಿ ಮಾ.22ರಂದು ವೇದಮೂರ್ತಿ ನೀಲೇಶ್ವರ ಆಲಂಬಾಡಿ ಪದ್ಮನಾಭ ತಂತ್ರಿಯವರ ನೇತೃತ್ವದಲ್ಲಿ ವಿವಿಧ ತಾಂತ್ರಿಕ, ವೈದಿಕ ಕಾರ್ಯಕ್ರಮ ನಡೆಯಿತು.ನಂತರ ನಡೆದ ಧಾರ್ಮಿಕ ಸಭೆಯಲ್ಲಿ ಸುಬ್ರಹ್ಮಣ್ಯ ಮಠ ಡಾ.ವಿದ್ಯಾಪ್ರಸನ್ನ ತೀರ್ಥ ಶ್ರೀಪಾದರು ಆಶೀರ್ವಚನ ನೀಡಿದರು.

ಅಧ್ಯಕ್ಷತೆಯನ್ನು ಮೂಡಬಿದ್ರೆ ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ.ಮೋಹನ್ ಆಳ್ವ ವಹಿಸಿದರು.

ಮುಖ್ಯ ಅತಿಥಿಗಳಾಗಿ ಉಜಿರೆ ಎಸ್‌ಡಿಎಂ ಕಾಲೇಜಿನ ಪ್ರಾಂಶುಪಾಲ ಡಾ.ಕುಮಾರ್ ಹೆಗ್ಡೆ ಉಜಿರೆ ಸಂಧ್ಯಾ ಟ್ರೇಡರ್ಸನ ರಾಜೇಶ್ ಪೈ, ಧಾರ್ಮಿಕ ಪರಿಷತ್ ನ ಮಾಜಿ ಸದಸ್ಯ ಬಿ.ಎಸ್.ಮುಕುಂದ ಸುವರ್ಣ, ಮಲವಂತಿಗೆ ಗ್ರಾ.ಪಂ. ಮಾಜಿ ಅಧ್ಯಕ್ಷ ಎಸ್.ಎಂ. ತುಳುಪುಳೆ, ಬೆಳ್ತಂಗಡಿ ತಾಲೂಕು ಚಿತ್ಪಾವನಸಮಾಜದ ಅಧ್ಯಕ್ಷ ತ್ರಿವಿಕ್ರಮ ಹೆಬ್ಬಾರ್, ಪ್ರಗತಿಪರ ಕೃಷಿಕ ಪೂವಣಿ ಗೌಡ ನೆಕ್ಕಿಲು ಮಲವಂತಿಗೆ, ಕೃಷಿಕ ಎಸ್.ಪಿ. ನಾರಾಯಣ ಗೌಡ ದಿಡುಪೆ, ಜಗನ್ಮಾತೆ ಬೈಲುವಾರು ಸಮಿತಿ ಪ್ರಮುಖ ಮಹೇಶ್ ಗೌಡ ಕರಿಯಾಲು, ಸರಸ್ವತಿ ಬೈಲುವಾರು ಸಮಿತಿ ಪ್ರಮುಖ ವಿಜಯ ಗೌಡ ಕರ್ಮಿಕಂಡ, ಭ್ರಮರಾಂಬಿಕೆ ಬೈಲುವಾರು ಸಮಿತಿ ಪ್ರಮುಖ ಉಮೇಶ್ ಪೂಜಾರಿ ಮಾಲೂರು, ಶಾರದಾಂಬಾ ಬೈಲುವಾರು ಸಮಿತಿ ಪ್ರಮುಖ ರಮಾನಂದ ಪೂಜಾರಿ ಮೇಲಿನ ಮಾಲೂರು, ನಾಗಾಂಬಿಕೆ ಬೈಲುವಾರು ಸಮಿತಿ ಪ್ರಮುಖ ಸಂಜೀವ ಗೌಡ, ಶಂಕರಿ ಬೈಲುವಾರು ಸಮಿತಿ ಪುರಂದರ ಗೌಡ ದರ್ಖಾಸು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಆಡಳಿತಾಧಿಕಾರಿ ಮೋಹನ್ ಬಂಗೇರ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಬಿ.ಕೆ.ಲೋಕೇಶ ರಾವ್, ಬ್ರಹ್ಮಕಲಶೋತ್ಸವ ಸಮಿತಿ ಪ್ರ. ಕಾರ್ಯದರ್ಶಿ ದಾಸಪ್ಪ ಗೌಡ ಕಾಂಜಾನು, ಜೀರ್ಣೋದ್ದಾರ ಸಮಿತಿ ಮತ್ತು ಬ್ರಹ್ಮಕಲಶೋತ್ಸವ ಸಮಿತಿ ಕೋಶಾಧಿಕಾರಿ ಕೆ.ವಾಸುದೇವ ರಾವ್ ಕಕ್ಕೆನೇಜಿ, ಬ್ರಹ್ಮಕಲಶೋತ್ಸವ ಸಮಿತಿ ಗೌರವ ಸಲಹೆಗಾರ ಬಿ. ಭುಜಬಲಿ ಧರ್ಮಸ್ಥಳ ಹಾಗೂ ಬ್ರಹ್ಮಕಲಶೋತ್ಸವ ಮತ್ತು ಜೀರ್ಣೋದ್ದಾರ ಸಮಿತಿಯ ಪದಾಧಿಕಾರಿಗಳು, ಭಕ್ತರು ಉಪಸ್ಥಿತರಿದ್ದರು.

ಸೌಂದರ್ಯ ಮತ್ತು ಧನ್ಯ ಪ್ರಾರ್ಥಿಸಿದರು. ಕೇಶವ ಫಡೆ ಸ್ವಾಗತಿಸಿದರು. ಜಯಂತ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು.ಸಕಾರ್ಯಾಲಯ ಸಮಿತಿ ಸಂಚಾಲಕ ಬಿ.ಕೆ. ಪರಮೇಶ್ವರ್ ರಾವ್ ಧನ್ಯವಾದವಿತ್ತರು.

Exit mobile version