Site icon Suddi Belthangady

ಪುದುವೆಟ್ಟುವಿನಲ್ಲಿ ಪೆಟ್ರೋಲಿಯಂ ಪೈಫ್ ಲೈನ್ ಗೆ ಕನ್ನ- ಲಕ್ಷಾಂತರ ಮೌಲ್ಯದ ಪೆಟ್ರೋಲ್ ಕಳ್ಳತನ

ಪುದುವೆಟ್ಟು: ಪುದುವೆಟ್ಟುವಿನಲ್ಲಿ ಪೆಟ್ರೋಲಿಯಂ ಪೈಫ್ ಲೈನ್ ನನ್ನು ಕೊರೆದು ಲಕ್ಷಾಂತರ ಮೌಲ್ಯದ ಪೆಟ್ರೋಲ್ ಕಳ್ಳತನ ಮಾಡಿರುವ ಘಟನೆ ಬೆಳಕಿಗೆ ಬಂದಿದ್ದು.

ಈ ಬಗ್ಗೆ ಕಂಪೆನಿಯವರು ನೀಡಿರುವ ದೂರಿನಂತೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಈ ಬಗ್ಗೆ ಪೆಟ್ರೋನೆಟ್ ಎಂ ಹೆಚ್ ಬಿ ಲಿಮಿಟೆಡ್ ನ ನೆರಿಯದ ಸ್ಟೇಶನ್ ಇನ್ ಚಾರ್ಜ್ ಆಗಿರುವ ರಾಜನ್ ಅವರು ಧರ್ಮಸ್ಥಳ ಪೊಲೀಸರಿಗೆ ದೂರು ನೀಡಿದ್ದು ಮಂಗಳೂರು, ಹಾಸನ, ಬೆಂಗಳೂರು ಪೆಟ್ರೋನೆಟ್ ಪೈಪ್ ಮೂಲಕ ಪೆಟ್ರೋಲಿಯಂ ವಸ್ತುಗಳು ಸಾಗಾಟವಾಗುತ್ತಿದ್ದು, ಬೆಳ್ತಂಗಡಿ ತಾಲೂಕಿನ ಪುದುವೆಟ್ಟು ಗ್ರಾಮದ ಆಲಡ್ಕ ಎಂಬಲ್ಲಿ ಮಾ.16 ರಿಂದ 19ರ ವರೆಗೆ ಕಳ್ಳರು ಪೆಟ್ರೋಲಿಯಂ ಪೈಪ್ ಲೈನ್ ಅನ್ನು, ಕೊರೆದು ಸದ್ರಿ ಪೈಪ್ ಲೈನ್ ಗೆ 2.5 ಇಂಚಿನ ಹೆಚ್ ಡಿ.ಪಿ ಇ ಪೈಪ್ ಅ‌ನ್ನು ಅಳವಡಿಸಿ ಆ ಮೂಲಕ ಸುಮಾರು 12,000 ಲೀಟರ್ ಗೂ ಅಧಿಕ ಡೀಸೆಲ್‌ ಅನ್ನು ಕಳವು ಮಾಡಿದ್ದು ಇದರ ಅಂದಾಜು ಮೌಲ್ಯ ಸುಮಾರು 9,60,000 ಆಗಬಹುದು ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಇದೀಗ ಘಟನೆಯ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಸ್ಥಳೀಯರ ಸಹಕಾರದೊಂದಿಗೆ ದೊಡ್ಡ ಮಟ್ಟದ ಡೀಸೆಲ್‌ ಕಳ್ಳತನ ನಡೆದಿದೆ ಎಂದು ಅನುಮಾನಿಸಲಾಗಿದೆ‌.

ಪೊಲೀಸರು ಪ್ರಕರಣದ ಬಗ್ಗೆ ತನಿಖೆ ಆರಂಭಿಸಿದ್ದಾರೆ.ಹೆಚ್ಚಿನ ಮಾಹಿತಿಗಳು ಇನ್ನಷ್ಟೇ ತಿಳಿದು ಬರಬೇಕಾಗಿದೆ.

Exit mobile version