Site icon Suddi Belthangady

ಇಂದಿನಿಂದ ಮಾ.20: ಕೊಲ್ಲಿ ಶ್ರೀ ದುರ್ಗಾಪರಮೇಶ್ವರಿ ಶ್ರೀ ದುರ್ಗಾದೇವಿ ದೇವಸ್ಥಾನದಲ್ಲಿ ಪುನರ್ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವ

ಮಿತ್ತಬಾಗಿಲು: ಇತಿಹಾಸ ಪ್ರಸಿದ್ಧ ಕ್ಷೇತ್ರ ಕೊಲ್ಲಿ ಶ್ರೀ ದುರ್ಗಾಪರಮೇಶ್ವರಿ/ ಶ್ರೀ ದುರ್ಗಾದೇವಿ ದೇವಸ್ಥಾನದಲ್ಲಿ ಪುನರ್ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವಕ್ಕೆ ಸಕಲ ಸಿದ್ಧತೆಗಳು ಪೂರ್ಣಗೊಂಡಿದ್ದು, ಇಂದು ಮಾ.20ರಿ೦ದ ಪ್ರಾರಂಭವಾಗುವ ಬ್ರಹ್ಮಕಲಶೋತ್ಸವ ಕಾರ್ಯಕ್ರಮಗಳು ಮಾ.28ರವರೆಗೆ ವೇದಮೂರ್ತಿ ನೀಲೇಶ್ವರ ಆಲಂಬಾಡಿ ಪದ್ಮನಾಭ ತಂತ್ರಿಯವರ ನೇತೃತ್ವದಲ್ಲಿ ವಿವಿಧ ತಾಂತ್ರಿಕ, ವೈದಿಕ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊ೦ದಿಗೆ ನಡೆಯಲಿದೆ.

ಇಂದಿನಿಂದ ಮಾ.20ರಂದು ಬೆಳಿಗ್ಗೆ 11ಕ್ಕೆ ಚಪ್ಪರ ಉದ್ಘಾಟನೆ, ಮಧ್ಯಾಹ್ನ 12ಕ್ಕೆ ಭಜನಾ ಕಾರ್ಯಕ್ರಮದ ಉದ್ಘಾಟನೆ, ಅಪರಾಹ್ನ 3ಕ್ಕೆ ಹೊರೆಕಾಣಿಕೆಯ ಮೆರವಣಿಗೆಗೆ ಚಾಲನೆ ಬೆದ್ರಬೆಟ್ಟುವಿನಿಂದ, ಸಂಜೆ 4ಕ್ಕೆ ತಂತ್ರಿಗಳ ಆಗಮನ, ಸಂಜೆ 5ಕ್ಕೆ ಉಗ್ರಾಣ ಉದ್ಘಾಟನೆ, ಸಂಜೆ 6ಕ್ಕೆ ಧಾರ್ಮಿಕ ಸಭಾ ಕಾರ್ಯಕ್ರಮ, ವಿವಿಧ ಭಜನಾ ಮಂಡಳಿಗಳಿಂದ ಭಜನಾ ಕಾರ್ಯಕ್ರಮ, ಸಂಜೆ ತಂತ್ರಿಗಳಿಗೆ ಪೂರ್ಣಕುಂಭ ಸ್ವಾಗತ ಸಂಜೆ ವಿವಿಧ ತಾಂತ್ರಿಕ ಮತ್ತು ವೈದಿಕ ಕಾರ್ಯಕ್ರಮಗಳು ನಡೆಯಲಿದೆ.

ಸಂಜೆ ನಡೆಯುವ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಶ್ರೀರಾಮ ಕ್ಷೇತ್ರದ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರು ಆಶೀರ್ವಚನ ನೀಡಲಿದ್ದು, ಅಧ್ಯಕ್ಷತೆಯನ್ನು ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಬಿ.ಕೆ ಧನಂಜಯ ರಾವ್ ವಹಿಸಲಿದ್ದಾರೆ.ವಿವಿಧ ಕ್ಷೇತ್ರಗಳ ಗಣ್ಯರು ಭಾಗವಹಿಸಲಿದ್ದಾರೆ.

ರಾತ್ರಿ ಕೊಲ್ಲೂರು ಶ್ರೀ ಕ್ಷೇತ್ರ ಮಹಾತ್ಮ ಯಕ್ಷಗಾನ ಕಾರ್ಯಕ್ರಮ ಮತ್ತು ಪ್ರೀತಿ ವಿಜೆ ಕಿಲ್ಲೂರು ಇವರಿಂದ ಪುಪ್ಪಾಂಜಲಿ ಗಣಪತಿ ನೃತ್ಯ, ಸ್ಥಳೀಯ ಮಹಿಳೆಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.

Exit mobile version