Site icon Suddi Belthangady

ನಿಡ್ಲೆ: ಬೂಡುಜಾಲು ನಾಡ ದೈವ ಮತ್ತು ಉಳ್ಳಾಲ್ತಿ ಅಮ್ಮನವರ ವರ್ಷಾವಧಿ ಸೋಣ ನಡಾವಳಿ, ದೊಂಪದ ಬಲಿ, ಜಾತ್ರಾ ಮಹೋತ್ಸವ

ನಿಡ್ಲೆ: ಬೂಡುಜಾಲು ನಾಡದೈವ ಮತ್ತು ಉಳ್ಳಾಳ್ತಿ ಅಮ್ಮನವರ ವರ್ಷಾವಧಿ ಸೋಣ ನಡಾವಳಿ ದೊಂಪದ ಬಲಿ ಜಾತ್ರಾ ಮಹೋತ್ಸವವು ಮಾ.14 ಮತ್ತು ಮಾ.15ರಂದು ನಡೆಯಿತು.

ಮಾ.14ರಂದು ದೈವಗಳ ಬೀಡಿನಲ್ಲಿ ರಾತ್ರಿ ಬೂಲ್ಯ ಸೇವೆ, ಉಳ್ಳಾಲ್ತಿ ನೇಮೋತ್ಸವ, ನಾಡ ದೈವ ನೇಮೋತ್ಸವ ನಡೆಯಿತು.

ಮಾ.15ರಂದು ಮಠoತಿ ಮಾರಿನಲ್ಲಿ ರಾತ್ರಿ ದೈವದ ಬೀಡಿನಲ್ಲಿ ಬೂಲ್ಯ ಸೇವೆ, ರಾತ್ರಿ ದೈವದ ಬೀಡಿನಿಂದ ಮಠoತಿ ಮಾರಿಗೆ ದೈವದ ಬಂಡಾರ ಬಂದು ಅನ್ನ ಸಂತರ್ಪಣೆ ನಡೆಯಿತು.

ರಾತ್ರಿ ಹೂವಿನ ಪೂಜೆ, ಉಲ್ಲಾಳ್ತಿ ನೇಮೋತ್ಸವ, ನಾಡದೈವ ನೇಮೋತ್ಸವ, ಕಲ್ಕುಡ ಕಲ್ಲುರ್ಟಿ ನೇಮೋತ್ಸವ ನಡೆಯಿತು.

ಈ ಸಂದರ್ಭದಲ್ಲಿ ದೇವಸ್ಥಾನದ ಮುಕ್ತೇಸರರು, ಆಡಳಿತ ಮಂಡಳಿ ಸದಸ್ಯರು ಹಾಗೂ ಊರ ಪರ ಊರ ಭಕ್ತಾದಿಗಳು ಉಪಸ್ಥಿತರಿದ್ದರು.

Exit mobile version