Site icon Suddi Belthangady

ಮುಂಡಾಜೆ: ವೆಬ್ ಸೈಟ್ ಉದ್ಘಾಟನೆ ಮತ್ತು ದೀಪ ಪ್ರದಾನ ಕಾರ್ಯಕ್ರಮ

ಮುಂಡಾಜೆ: ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು ಇದರ ಆಡಳಿತಕ್ಕೊಳಪಟ್ಟ ವಿವೇಕಾನಂದ ಶಿಕ್ಷಣ ಸಂಸ್ಥೆಯ ವೆಬ್ ಸೈಟ್ ಉದ್ಘಾಟನೆ ಕಾರ್ಯಕ್ರಮ ಹಾಗೂ ಸರಸ್ವತಿ ಆಂಗ್ಲ ಮಾಧ್ಯಮ ಶಾಲೆಯ ದೀಪ ಪ್ರದಾನ ಕಾರ್ಯಕ್ರಮವು ಎ.ಪಿ.ಜೆ. ಅಬ್ದುಲ್ ಕಲಾಂ ಸಭಾಂಗಣದಲ್ಲಿ ನಡೆಯಿತು.

ಮುಖ್ಯ ಅಭ್ಯಾಗತರಾಗಿ ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು ಇದರ ಖಜಾಂಚಿಯವರಾದ ಶ್ರೀ ಅಚ್ಯುತ ನಾಯಕ್ ಉದ್ಘಾಟಿಸಿ, ‘ಸಂಸ್ಕಾರವು ನಿತ್ಯ ಜೀವನದ ಅಂಗವಾಗಬೇಕು ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ಸಂಸ್ಕಾರವನ್ನು ಚಿಕ್ಕಂದಿನಿಂದಲೇ ಮೈಗೂಡಿಸಿಕೊಳ್ಳಬೇಕು’ ಎಂದರು.

ಮುಂಡಾಜೆ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಶ್ರೀ ವಿನಯಚಂದ್ರ, ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯಿನಿ ಚಂದ್ರಮತಿ ವಿದ್ಯಾರ್ಥಿಗಳ ಭವಿಷ್ಯ ಉಜ್ವಲವಾಗಲಿ ಎಂದು ಶುಭ ಹಾರೈಸಿದರು.

ಈ ಸಂದರ್ಭದಲ್ಲಿ 10ನೇ ತರಗತಿಯ ವಿದ್ಯಾರ್ಥಿಗಳು 9ನೇ ತರಗತಿಯ ವಿದ್ಯಾರ್ಥಿಗಳಿಗೆ ದೀಪವನ್ನು ಹಸ್ತಾಂತರಿಸಿದರು.ವಿದ್ಯಾರ್ಥಿಗಳಾದ ಶ್ರೀನಂದ ಸ್ವಾಗತಿಸಿ, ಸಾತ್ವಿ ಕಾರ್ಯಕ್ರಮವನ್ನು ನಿರೂಪಿಸಿ, ಸ್ಪಂದನ ಹೆಚ್ ಧನ್ಯವಾದಗೈದರು.

Exit mobile version