Site icon Suddi Belthangady

ಸುರ್ಯ ಶ್ರೀ ಸದಾಶಿವರುದ್ರ ದೇವಸ್ಥಾನದಲ್ಲಿ ಪ್ರತಿಷ್ಠಾ ವಾರ್ಷಿಕೋತ್ಸವ

ನಡ: ಸುರ್ಯ ಶ್ರೀ ಸದಾಶಿವರುದ್ರ ದೇವರ ಸನ್ನಿಧಿಯಲ್ಲಿ ಮಾ.18ರಂದು ಪ್ರತಿಷ್ಠಾ ವಾರ್ಷಿಕೋತ್ಸವ ನಡೆಯಿತು.

ಮಾ.18ರಂದು ಪೂರ್ವಾಹ್ನ ಪುಣ್ಯಾಹ, ಗಣಪತಿ ಹೋಮ, ಕಲಶಪೂಜೆ, ಕಲಶಾಭಿಷೇಕ ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು.

ಈ ಸಂದರ್ಭದಲ್ಲಿ ಆನುವಂಶಿಕ ಆಡಳಿತ ಮೊಕ್ತೇಸರ ಡಾ.ಸತೀಶ್ಚಂದ್ರ ಸುರ್ಯಗುತ್ತು, ಅಭಿವೃದ್ಧಿ ಮಂಡಳಿ ಅಧ್ಯಕ್ಷ ರಾಜಶೇಖರ್ ಅಜ್ರಿ, ಮುನಿರಾಜ್ ಅಜ್ರಿ ಸದಸ್ಯರು, ಗಣ್ಯರು, ಗ್ರಾಮಸ್ಥರು, ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

ರಾತ್ರಿ ಗಂಟೆ 8ರಿಂದ ರಂಗಪೂಜೆ, ಉತ್ಸವ ನಡೆಯಲಿದೆ.

ಮಾ.19ರಂದು ಜಾತ್ರ ಮಹೋತ್ಸವ ಪ್ರಯುಕ್ತ ಪೂರ್ವಾಹ್ನ ಗಂಟೆ 9.15ರಿಂದ ಗಣಪತಿ ಹೋಮ, ನವಕ ಪ್ರಧಾನ ಕಲಶಾಭಿಷೇಕ, ಧ್ವಜಾರೋಹಣ, ಮಹಾಪೂಜೆ, ನಿತ್ಯಬಲಿ, ಅನ್ನಸಂತರ್ಪಣೆ.

ಮಾ.20ರಂದು ಮಧ್ಯಾಹ್ನ ಗಂಟೆ 12.30ರಿಂದ ಮಹಾಪೂಜೆ, ನಿತ್ಯಬಲಿ, ಅನ್ನಸಂತರ್ಪಣೆ, ಸಂಜೆ ಗಂಟೆ 6ರಿಂದ ಸುರ್ಯಗುತ್ತು ಮನೆಯಿಂದ ಧರ್ಮದೈವಗಳ ಭಂಡಾರದ ಆಗಮನ, ರಾತ್ರಿ ಗಂಟೆ 8ರಿಂದ ಉತ್ಸವ ಹೊರಟು ವಸಂತಕಟ್ಟೆ ಪೂಜೆ, ಮಹಾಪೂಜೆ.

ಮಾ.21ರಂದು ಪೂರ್ವಾಹ್ನ ಗಂಟೆ 7ರಿಂದ ಸೊಡರಬಲಿ ಉತ್ಸವ, ಮಧ್ಯಾಹ್ನ 12.30ರಿಂದ ಮಹಾಪೂಜೆ, ಅನ್ನಸಂತರ್ಪಣೆ, ರಾತ್ರಿ ಗಂಟೆ 8ರಿಂದ ಉತ್ಸವ ಹೊರಟು ಕೆರೆಕಟ್ಟೆ ಪೂಜೆ, ಮಹಾಪೂಜೆ

ಮಾ.22ರಂದು ಪೂರ್ವಾಹ್ನ ಗಂಟೆ 8.45ರಿಂದ ದರ್ಶನ ಬಲಿ ಉತ್ಸವ, ಮಧ್ಯಾಹ್ನ ಗಂಟೆ 12.30ರಿಂದ ಮಹಾಪೂಜೆ, ಮಧ್ಯಾಹ್ನ ಗಂಟೆ 1ರಿಂದ ಪ್ರಸಾದ ವಿತರಣೆ, ಅನ್ನಸಂತರ್ಪಣೆ, ರಾತ್ರಿ ಗಂಟೆ 8ರಿಂದ ಉತ್ಸವ, ಪುಷ್ಪ ರಥೋತ್ಸವ, ನೃತ್ಯಬಲಿ ಉತ್ಸವ. ರಥಕಟ್ಟೆ ಪೂಜೆ, ಮಹಾಪೂಜೆ, ಭೂತಬಲಿ, ಶಯನೋತ್ಸವ.

ಮಾ.23ರಂದು ಪೂರ್ವಾಹ್ನ ಗಂಟೆ 9ರಿಂದ ಕವಾಟೋದ್ಘಾಟನೆ, ಕಲಶಾಭಿಷೇಕ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಸಂಜೆ ಗಂಟೆ 6ಕ್ಕೆ ಯಾತ್ರಾಹೋಮ, ಅವಬೃತ ಸ್ನಾನಕ್ಕೆ ಹೊರಡುವುದು, ರಾತ್ರಿ ಗಂಟೆ 10.30ಕ್ಕೆ ಧ್ವಜಾವರೋಹಣ, ರಾತ್ರಿ ಗಂಟೆ 11.00ರಿಂದ ದೈವಗಳ ನೇಮ ನಡೆಯಲಿದೆ.

ಮಾ 20ರಂದು ಗಂಟೆ 9.30ರಿಂದ ರಾಜ್ಯ ಪ್ರಶಸ್ತಿ ವಿಜೇತ ತೆಲಿಕೆದ ಬೊಳ್ಳಿ ಡಾ.ದೇವದಾಸ್ ಕಾಪಿಕಾಡ್ ರಚಿಸಿ, ನಟಿಸಿ ನಿರ್ದೇಶಿಸಿರುವ ತುಳು ಹಾಸ್ಯಮಯ ನಾಟಕ ನಡೆಯಲಿದೆ.

ಮಾ.21ರಂದು ರಾತ್ರಿ ಗಂಟೆ 9.30ರಿಂದ ದುರ್ಗಾ ಸ್ವಾತಿ ನೃತ್ಯಾಲಯ, ಅಸೈಗೊಳಿ ಇದರ ನೃತ್ಯ ಗುರು ಕರ್ನಾಟಕ ಕಲಾಶ್ರೀ ವಿದುಷಿ ಸ್ವಾತಿ ಭಟ್ ಪಿ. ಇವರ ಶಿಷ್ಯರಿಂದ ರಾತ್ರಿ ಗಂಟೆ 11ರಿಂದ ಬಾಚಕೆರೆ ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ಯಕ್ಷಗಾನ ಮಂಡಳಿ ಸರಪಾಡಿ ಇವರಿಂದ ಯಕ್ಷಗಾನ ಬಯಲಾಟ ನಡೆಯಲಿದೆ.

ಮಾ.22ರಂದು ರಾತ್ರಿ ಗಂಟೆ 9.30ರಿಂದ ಅಂಗನವಾಡಿ ಕೇಂದ್ರ, ಸುರ್ಯ ಹಾಗೂ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ, ಸುರ್ಯ ಇಲ್ಲಿಯ ಮಕ್ಕಳಿಂದ ರಾತ್ರಿ ಗಂಟೆ 11ರಿಂದ ಸಂಗಮ ಕಲಾವಿದರು ಉಜಿರೆ ಇವರಿಂದ ಸುಬ್ಬು ಸಂಟ್ಯಾರ್ ರಚಿಸಿ, ಗಿರೀಶ್ ಹೊಳ್ಳ ನಿರ್ದೇಶಿಸಿರುವ ತುಳು ಸಾಂಸಾರಿಕ ಹಾಸ್ಯಮಯ ನಾಟಕ ಪಚ್ಚು ಪಾತೆರೊಡು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ, ಎಂದು ಆನುವಂಶಿಕ ಆಡಳಿತ ಮೊಕ್ತೇಸರ ಡಾ. ಸತೀಶ್ಚಂದ್ರ ಸುರ್ಯಗುತ್ತು ತಿಳಿಸಿದ್ದಾರೆ.

Exit mobile version