Site icon Suddi Belthangady

ಪಡ್ಡ್ಯಾರಬೆಟ್ಟ ಶ್ರೀ ಕೊಡಮಣಿತ್ತಾಯ ದೈವದ ವರ್ಷಾವಧಿ ಜಾತ್ರಾ ಮಹೋತ್ಸವ: ರಥೋತ್ಸವ, ಕೊಡಮಣಿತ್ತಾಯ ದೈವದ ನೇಮೋತ್ಸವ

ಪೆರಿಂಜೆ: ಶ್ರೀ ಕೊಡಮಣಿತ್ತಾಯ ಮೂಲ ದೈವಸ್ಥಾನ ಶ್ರೀ ಕ್ಷೇತ್ರ ಪಡ್ಡ್ಯಾರಬೆಟ್ಟ ಶ್ರೀ ಕೊಡಮಣಿತ್ತಾಯ ದೈವದ ವರ್ಷಾವಧಿ ಜಾತ್ರಾ ಮಹೋತ್ಸವವು ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಮಾ.14 ರಿಂದ ಮಾ.19ರವರೆಗೆ ನಡೆಯಿತು.

ಮಾ.17ರಂದು ವರ್ಷಾವಧಿ ಜಾತ್ರೋತ್ಸವ, ಮಧ್ಯಾಹ್ನ ರಥದಲ್ಲಿ ಮಹಾಪೂಜೆ, ರಥೋತ್ಸವ, ಹೂವಿನ ಪೂಜೆ ಮಹಾ ಅನ್ನಸಂತರ್ಪಣೆ ಹಾಗೂ ರಾತ್ರಿ ಕೊಡಮಣಿತ್ತಾಯ ದೈವದ ನೇಮೋತ್ಸವವು ವಿಜೃಂಭಣೆಯಿಂದ ನಡೆಯಿತು.

ಮಾ.18ರಂದು ಧ್ವಜ ಅವರೋಹಣ, ಸಂಪ್ರೋಕ್ಷಣೆ ಪಡೋಡಿ ಗುತ್ತಿಗೆ ಭಂಡಾರ ಹಿಂದಿರುಗುವುದು., ಮಾ.19 ರಂದು ರಾತ್ರಿ ಗಂಟೆ 7.30ರಿಂದ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಲಾಪಗಳು, ಹೂವಿನ ಪೂಜೆ, ಕೊಡಮಣಿತ್ತಾಯ ದೈವದ ಕುರುಸಂಬಿಲ ನೇಮ, ತುಲಾಭಾರ ಸೇವೆ ನಡೆಯಲಿದೆ.

ಈ ಸಂದರ್ಭದಲ್ಲಿ ಪಡ್ಡ್ಯಾರಬೆಟ್ಟ ಅನುವಂಶೀಯ ಆಡಳಿತದಾರರು ಎ.ಜೀವಂಧರ ಕುಮಾರ್ ಯಾನೆ ಕಂಚಿ ಪೂವಣಿಯವರು ಪಡೋಡಿಗುತ್ತು, ವಿಕಾಸ್ ಜೈನ್‌, ವಿಶ್ವಾಸ್‌ ಜೈನ್, ಮತ್ತು ಮನೆಯವರು, ಊರ ಪರವೂರ ಗ್ರಾಮಸ್ಥರು ಉಪಸ್ಥಿತರಿದ್ದರು.

Exit mobile version