Site icon Suddi Belthangady

70 ಸಾವಿರ ವೇತನದೊಂದಿಗೆ ಪಿಡಿಒ ನೇಮಕಾತಿಗೆ ಅರ್ಜಿ ಆಹ್ವಾನ- ವಿದ್ಯಾಮಾತಾ ಅಕಾಡೆಮಿಯಲ್ಲಿ ತರಬೇತಿ ಪ್ರಾರಂಭ

ಬೆಳ್ತಂಗಡಿ: ಕರ್ನಾಟಕ ಸರಕಾರವು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (PDO) 150 ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ಪ್ರಾರಂಭಿಸಿದ್ದು ಅರ್ಜಿ ಆಹ್ವಾನಿಸಲಾಗಿದೆ.

ಪ್ರತಿಷ್ಠಿತ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರವಾದ ವಿದ್ಯಾಮಾತಾ ಅಕಾಡೆಮಿಯಲ್ಲಿ ನೇರ ಮತ್ತು ಆನ್ಲೈನ್ ಮೂಲಕ ಲಿಖಿತ ಪರೀಕ್ಷಾ ತರಬೇತಿಯನ್ನು ಪ್ರಾರಂಭಿಸಲಿದ್ದು ಮಾ.18ರಿಂದ ಪ್ರವೇಶಾತಿ ಪ್ರಾರಂಭಗೊಳ್ಳಲಿದೆ, ತರಬೇತಿ ಅವಧಿ ಎರಡುವರೆ ತಿಂಗಳು.

ಕಳೆದ ಎರಡುವರೆ ವರ್ಷದಿಂದ ಪೊಲೀಸ್, ಅರಣ್ಯ ಇಲಾಖೆ, ಬ್ಯಾಂಕಿಂಗ್, ಕೆ.ಎಂ.ಎಫ್, ಶಿಕ್ಷಕರ ನೇಮಕಾತಿ ಸೇರಿದಂತೆ 116 ರಷ್ಟು ಅಭ್ಯರ್ಥಿಗಳು ವಿದ್ಯಾಮಾತಾ ಅಕಾಡೆಮಿಯಲ್ಲಿ ತರಬೇತಿ ಪಡೆದು ಸರಕಾರಿ ಹುದ್ದೆಗಳನ್ನು ಏರಿರುತ್ತಾರೆ.ಕರ್ನಾಟಕ ಸರಕಾರವು ಇತ್ತೀಚೆಗೆ ನೇಮಕಾತಿ ಪ್ರಕ್ರಿಯೆಯನ್ನು ಆರಂಭಿಸಿರುವ ಗ್ರಾಮ ಆಡಳಿತ ಅಧಿಕಾರಿ (VAO) ಹುದ್ದೆಗಳಿಗೂ ಅಕಾಡೆಮಿಯಲ್ಲಿ ತರಬೇತಿ ಪ್ರಾರಂಭವಾಗಿದ್ದು, ಸದ್ಯ ಕರೆದಿರುವ PDO ಹುದ್ದೆಗಳಿಗೆ ತರಬೇತಿಯನ್ನು ಪ್ರಾರಂಭಿಸಲಾಗುತ್ತಿದೆ.

ನೇರ ತರಗತಿಗಳು: ಬೆಳಗ್ಗೆ 9:30ರಿಂದ ಮಧ್ಯಾಹ್ನ 1:00ರವರೆಗೆ (ವಾರದ 5 ದಿನ) ಆನ್ಲೈನ್ ತರಗತಿಗಳು- ರಾತ್ರಿ 7:00 ರಿಂದ 8:00ರವರೆಗೆ (ವಾರದ ಎಲ್ಲಾ ದಿನ) ಉದ್ಯೋಗಸ್ಥರಿಗೆ, ವಿದ್ಯಾರ್ಥಿಗಳಿಗೆ, ಗೃಹಿಣಿಯರಿಗಾಗಿ ಅನುಕೂಲವಾಗುವಂತೆ ನಡೆಯುತ್ತವೆ.

PDO ನೇಮಕಾತಿಯ ಅರ್ಹತೆಗಳು: ವಿದ್ಯಾರ್ಹತೆ: ಯಾವುದೇ ಪದವಿ, ವೇತನ: 70,000ವರೆಗೆ, ಹುದ್ದೆಗಳು:150, ವಯಸ್ಸಿನ ಮಿತಿ:18ರಿಂದ 40 (ಸಾಮಾನ್ಯ 35 , ಒ.ಬಿ.ಸಿ 38 , SC, ST 40), ನೇಮಕಾತಿ ಪ್ರಕ್ರಿಯೆ : ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ, ಅರ್ಜಿ ಪ್ರಾರಂಭ ದಿನಾಂಕ: 15/04/2024 ರಿಂದ 15/05/2024, ಅರ್ಜಿ ಸಲ್ಲಿಸಲು ಅವಶ್ಯಕ ದಾಖಲೆಗಳು: ಫೋಟೋ, ಅಂಕಪಟ್ಟಿ, ಆಧಾರ್ ಕಾರ್ಡ್, ಜಾತಿ ಪ್ರಮಾಣ ಪತ್ರ, ಕನ್ನಡ ಮಾಧ್ಯಮ ಮತ್ತು ಗ್ರಾಮೀಣ ಅಭ್ಯರ್ಥಿ ಪ್ರಮಾಣ ಪತ್ರ.

ತರಬೇತಿಗಾಗಿ ಪ್ರವೇಶಾತಿ ಪಡೆಯಲು ಇಚ್ಛಿಸುವವರು ಹೆಚ್ಚಿನ ಮಾಹಿತಿಗಾಗಿ: ವಿದ್ಯಾಮಾತಾ ಅಕಾಡೆಮಿ, ಹಿಂದೂಸ್ತಾನ್ ಕಾಂಪ್ಲೆಕ್ಸ್, 1ನೇ ಮಹಡಿ, ಎ.ಪಿ.ಎಂ.ಸಿ ರಸ್ತೆ ಪುತ್ತೂರು. 9620468869/ 9148935808, ಸುಳ್ಯ ಶಾಖೆ : TAPCMS ಬಿಲ್ಡಿಂಗ್, ಕಾರ್ ಸ್ಟ್ರೀಟ್, 9448527606.

Exit mobile version