ಬೆಳ್ತಂಗಡಿ: ಡಿ.ಕೆ.ಆರ್.ಡಿ.ಎಸ್, ನವಜೀವನ ಆರೈಕೆ ಮತ್ತು ಬೆಂಬಲ ಕೇಂದ್ರದ ನೇತೃತ್ವದಲ್ಲಿ ಮಾ.16ರಂದು ಹೆಚ್.ಐ.ವಿ/ಏಡ್ಸ್ ಸೋಂಕಿತ ಹಾಗೂ ಬಾಧಿತ ವ್ಯಕ್ತಿಗಳ ಮಾಸಿಕ ಬೆಂಬಲ ಸಭೆ ಮತ್ತು ಮಾಹಿತಿ ಕಾರ್ಯಕ್ರಮವು ಬೆಳ್ತಂಗಡಿ ಸಾಂತೋಮ್ ಟವರ್ ನಲ್ಲಿ ಆಯೋಜಿಸಲಾಗಿತ್ತು.
ಬೆಳ್ತಂಗಡಿ ಸ್ನೇಹಜ್ಯೋತಿ ಮಹಿಳಾ ತಾಲೂಕು ಒಕ್ಕೂಟ ಇದರ ಅಧ್ಯಕ್ಷೆ ಮಂಜುಳಾ ಜೋನ್ ಇವರು ಆಗಮಿಸಿ, ಜೀವನದಲ್ಲಿ ಸ್ವ- ಉದ್ಯೋಗ ಮಾಡಿಕೊಂಡು ಬದುಕು ಸದೃಢಗೊಳಿಸಲು ಸಾಧ್ಯ ಎಂದು ಮಾತನಾಡಿ, ಪೌಷ್ಟಿಕ ಆಹಾರ ವಿತರಿಸಿದರು.
ಪುಷ್ಪರಾಜ್ ರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಡಿ.ಕೆ.ಆರ್.ಡಿ.ಎಸ್ ಸಂಸ್ಥೆಯ ನಿರ್ದೇಶಕ ಫಾ.ಬಿನೋಯಿ ಎ.ಜೆ ರವರು ಗೆದ್ದವನಿಗೆ ಜೀವನ ಎನ್ನುವುದು ಸೋಲು ಗೆಲುವಿನ ಆಟ, ಗೆದ್ದವನಿಗೆ ಸೋಲಬಾರದೆಂಬ ಭಯ ಇದ್ದರೆ ಸೋತವನಿಗೆ ಗೆಲ್ಲಲೇಬೇಕು ಎಂಬ ಛಲವಿರುತ್ತದೆ ಎಂದು ಪ್ರಾಸ್ತವಿಕ ನುಡಿಯನ್ನು ಆಡಿದರು.
ನವಜೀವನ ಆರೈಕೆ ಮತ್ತು ಬೆಂಬಲ ಕೇಂದ್ರದ ಸದಸ್ಯೆ ಹೇಮಲತಾರವರು ಪ್ರಾರ್ಥನೆ ಹಾಡಿದರು.ಸರಕಾರಿ ಪ್ರಥಮ ದರ್ಜೆ ಕಾಲೇಜು ವಾಮದಪದವು ಇಲ್ಲಿನ ಬಿ.ಎಸ್.ಡಬ್ಲ್ಯೂ ವಿದ್ಯಾರ್ಥಿನಿ ಕು.ದೀಪ್ತಿ ಎಲ್ಲರನ್ನೂ ಸ್ವಾಗತಿಸಿದರು.
ಡಿ.ಕೆ.ಆರ್.ಡಿ.ಎಸ್ ನ ಸಂಯೋಜಕ ಥೋಮಸ್ ರವರು ವಂದಿಸಿದರು. ಬಿ.ಏಸ್.ಡಬ್ಲ್ಯೂ ವಿದ್ಯಾರ್ಥಿನಿ ಕು.ಸುಶ್ಮಿತಾ ಕಾರ್ಯಕ್ರಮ ನಿರೂಪಿಸಿದರು.
ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾತು.