Site icon Suddi Belthangady

ಆಲ್ ಇಂಡಿಯಾ ಇಂಟರ್ ಯುನಿವರ್ಸಿಟಿ ಪುರುಷರ ನೆಟ್ ಬಾಲ್ ಚಾಂಪಿಯನ್ ಶಿಪ್ ಪಂದ್ಯಾಟ: ಎಸ್ ಡಿ ಎಮ್ ಕಾಲೇಜಿನ ವಿದ್ಯಾರ್ಥಿಗಳು ಚಾಂಪಿಯನ್

ಉಜಿರೆ: 2023-24ನೇ ಸಾಲಿನ ಆಲ್ ಇಂಡಿಯಾ ಇಂಟರ್ ಯುನಿವರ್ಸಿಟಿ ಪುರುಷರ ನೆಟ್ ಬಾಲ್ ಚಾಂಪಿಯನ್ ಶಿಪ್ ಪಂದ್ಯಾವಳಿಯು ಸಿದ್ಧಾರ್ಥ ಇನ್ಸ್ಟಿಟ್ಯೂಷನ್ ಆಫ್ ಹೈಯರ್ ಎಜುಕೇಶನ್ ತುಮಕೂರಿನಲ್ಲಿ ಮಾ.12ರಿಂದ ಮಾ.15ರ ತನಕ ನಡೆಯಿತು.

ಈ ಕ್ರೀಡಾಕೂಟದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ತಂಡವು ಚಾಂಪಿಯನ್ ಪಟ್ಟವನ್ನು ಅಲಂಕರಿಸಿದೆ.

ಮಂಗಳೂರು ವಿಶ್ವವಿದ್ಯಾನಿಲಯ ತಂಡದಲ್ಲಿ ಎಸ್ ಡಿ ಎಮ್ ಕಾಲೇಜಿನ ವಿದ್ಯಾರ್ಥಿಗಳಾದ ಮಯೂರ್, ಸುಗನ್, ವಿಶ್ರುತ್, ತರುಣ್, ಗಗನ್, ಪವನ್, ಮೋಹನ್, ಚಿಂತನ್, ಪುನೀತ್, ಯಶವಂತ್ ತಂಡವನ್ನು ಪ್ರತಿನಿಧಿಸಿದ್ದರು.

ಇವರಿಗೆ ಸುದೀನ ಪೂಜಾರಿ ಹಾಗೂ ನಿತಿನ್ ತರಬೇತಿಯನ್ನು ನೀಡಿರುತ್ತಾರೆ.

Exit mobile version