ಧರ್ಮಸ್ಥಳ: ಅಂತರಾಷ್ಟ್ರೀಯ ಮಟ್ಟದ ಗುಣಮಟ್ಟದ ಮತ್ತು ಸುರಕ್ಷತೆಯ ತಂತ್ರಜ್ಞಾನವನ್ನು ಹೊಂದಿರುವ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಗೆ ಅಂತರಾಷ್ಟ್ರೀಯ ಐ ಎಸ್ ಒ 27001 ಮ್ಯಾನತೆಯನ್ನು NQA ಸಂಸ್ಥೆ ಬೆಂಗಳೂರಿನ ಪ್ರದಾನ ವ್ಯವಸ್ಥಾಪಕ, ನಿರ್ದೇಶಕ ಅಮರ್ ದೀಪ್ ಸಿ.ಕೆ. ಅವರು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರಿಗೆ ಹಸ್ತಾಂತರಿಸಿದರು.
ಅವರು ಮಾ.15ರಂದು ಧರ್ಮಸ್ಥಳ ಯೋಜನೆಯ ಸಭಾಂಗಣದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಈ ಸಂದರ್ಭದಲ್ಲಿ ಧರ್ಮಸ್ಥಳ ಹೇಮಾವತಿ ವಿ ಹೆಗ್ಗಡೆ, ಮಾನಸ ಕನ್ಸಿಸ್ಟೆನ್ಸಿಯ ಮುಖ್ಯಸ್ಥ ಭಾರ್ಗವ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಎಲ್.ಹೆಚ್. ಮಂಜುನಾಥ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಅನಿಲ್ ಎಸ್.ಎಸ್ ಹಾಗೂ ಮುಖ್ಯ ಹಣಕಾಸು ಅಧಿಕಾರಿ ಶಾಂತಾರಾಮ್ ಪೈ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ನಿದೇರ್ಶಕರುಗಳಾದ ರಾಜೇಶ್ ಶೆಟ್ಟಿ ಮತ್ತು ಸುರೇಶ್ ಕಾರ್ಯಕ್ರಮ ನಿರೂಪಿಸಿದರು.