Site icon Suddi Belthangady

1 ಸಾವಿರ ಕುಟುಂಬಕ್ಕೆ ರಂಝಾನ್ ಆಹಾರ ಕಿಟ್ ವಿತರಣೆ- ಮಲ್‌ಜ‌ಅ ಸಂಸ್ಥೆ ಬಡವರ ಕಣ್ಣೀರೊರೆಸುವ ಉದ್ದೇಶ ಮಾತ್ರ ಹೊಂದಿದೆ: ಸಾದಾತ್ ತಂಙಳ್

ಬೆಳ್ತಂಗಡಿ: ಕಳೆದ 16 ವರ್ಷಗಳ ಹಿಂದೆ ಮಲ್‌ಜ‌ಅ ಸಂಸ್ಥೆ ಈ ಭಾಗದಲ್ಲಿ ಉದಯವಾಗುವಾಗ ತನ್ನ ಸಂಸ್ಥೆಯ ಬೆಳವಣಿಗೆಯನ್ನು ಮಾತ್ರ ನೋಡದೆ ಸಮುದಾಯದ ಅರ್ಹರ ಮೇಲೆ ನೆರವಿನ ದೃಷ್ಟಿಯಲ್ಲಿ ಕರುಣೆ ತೋರಿದ್ದು ಈ ಸಂಸ್ಥೆಯ ವಿಶೇಷ.

ತಾಜುಲ್ ಉಲಮಾ ಅವರ ಕೈಯಿಂದ ಶಿಲಾನ್ಯಾಸ ಮಾಡಿಕೊಂಡು ಅವರ ಆಶೀರ್ವಾದ ಬಲದಿಂದ ಇಂದಿಗೂ ಮುನ್ನಡೆಯುತ್ತಿದೆ.ಇದರ ಬೆಳವಣಿಗೆಯಲ್ಲಿ ನಾವು ಸ್ವಯಂ ಭಾಗಿಗಳಾಗಬೇಕು ಎಂದು ಬೆಳ್ತಂಗಡಿ ತಾಲೂಕು ಸುನ್ನೀ ಸಂಯುಕ್ತ ಜಮಾಅತ್ ಉಪ ಖಾಝಿ ಸಯ್ಯಿದ್ ಸಾದಾತ್ ತಂಙಳ್ ಹೇಳಿದರು.

ಕಾಶಿಬೆಟ್ಟು ಮಲ್‌ಜ‌ಅ ಕ್ಯಾಂಪಸ್ ನಲ್ಲಿ ನಡೆದ 40 ಲಕ್ಷ ರೂ. ವೆಚ್ಚದಲ್ಲಿ ಅರ್ಹ 1 ಸಾವಿರ ಕುಟುಂಬಗಳಿಗೆ ರಂಝಾನ್ ಆಹಾರ ಸಾಮಾಗ್ರಿಗಳ ಕಿಟ್ ವಿತರಿಸಿ ಅವರು ಮಾತನಾಡಿದರು.ಸಂಸ್ಥೆಯ ಚೇರ್ಮೆನ್ ಸಯ್ಯಿದ್ ಅಲವಿ‌ ಜಲಾಲುದ್ದೀನ್ ತಂಙಳ್ ಅವರು ಸಂಸ್ಥೆಯ ಕಾರ್ಯನಿಮಿತ್ತ ಸೌದಿ ಅರೇಬಿಯಾದಲ್ಲಿದ್ದು ಶುಭ ಕೋರಿದರು.

ಖ್ಯಾತ ಯುವ ವಾಗ್ಮಿ ನೌಫಲ್ ಸಖಾಫಿ ಕಳಸ ಪ್ರಧಾನ ಸಂದೇಶ‌ ಭಾಷಣ ಮಾಡಿದರು.

ಅತಿಥಿಗಳಾಗಿ ಸಂಸ್ಥೆಯ ಮುದರ್ರಿಸ್ ಆಸಿಫ್ ಅಹ್‌ಸನಿ, ಕರ್ನಾಟಕ ಮುಸ್ಲಿಂ ಜಮಾಅತ್ ಉಜಿರೆ ಶಾಖೆ ಅಧ್ಯಕ್ಷ ಹೈದರ್ ಮದನಿ, ಮುಹ್ಯುದ್ದೀನ್ ಕುಂಟಿನಿ, ಎಸ್‌ವೈಎಸ್ ಸಂಘಟಕ ಸಲೀಂ ಕನ್ಯಾಡಿ, ಪತ್ರಕರ್ತ ಅಶ್ರಫ್ ಆಲಿಕುಂಞಿ ಮುಂಡಾಜೆ, ಎಸ್.ಎಮ್.ಎ ಝೋನ್ ಅಧ್ಯಕ್ಷ ಹಮೀದ್ ನೆಕ್ಕರೆ, ಮಲ್‌ಜ‌ಅ ರಂಝಾನ್ ಕಿಟ್ ಸಂಯೋಜಕ ಸುಲೈಮಾನ್ ಕುಂಟಿನಿ, ಸಾರ್ವಜನಿಕ ಸಂಪರ್ಕಾಧಿಕಾರಿ ಶೆರೀಫ್ ಬೆರ್ಕಳ, ಸ್ವದಕ ಮಾಸ್ಟರ್ ಮೊದಲಾದವರು ಉಪಸ್ಥಿತರಿದ್ದರು.

ಸಂಸ್ಥೆಯ ಮೆನೇಜರ್ ಮೆಹಬೂಬುರ್ರಹ್ಮಾನ್ ಸಖಾಫಿ ಕಿನ್ಯ ಸ್ವಾಗತಿಸಿ ಪ್ರಸ್ತಾವನೆಗೈದರು.

Exit mobile version