Site icon Suddi Belthangady

ಕೊಕ್ಕಡದಲ್ಲಿ ಒಂಟಿ ಸಲಗ ಪ್ರತ್ಯಕ್ಷ

ಕೊಕ್ಕಡ: ತಾಲೂಕಿನ ಕೊಕ್ಕಡ ಗ್ರಾಮದಲ್ಲಿ ಬುಧವಾರ ಮಧ್ಯರಾತ್ರಿ ಆನೆ ಕಾಣಿಸಿಕೊಂಡಿದೆ.

ಕೊಕ್ಕಡ ಗ್ರಾಮದ ಗುಂಪಕಲ್ಲು, ತೆಂಕುಬೈಲು ಪ್ರದೇಶದಲ್ಲಿ ತಿರುಗಾಡಿ ಬಳಿಕ ಕಲಾಯಿ ಎಸ್ಟೇಟ್ ಸಮೀಪ ಆನೆ ನಿಂತಿರುವುದನ್ನು ಪ್ರತ್ಯಕ್ಷದರ್ಶಿ ತಿಳಿಸಿದ್ದಾರೆ.

ಆನೆ ತಿರುಗಾಡಿದ ಸ್ಥಳದಲ್ಲಿ ಕೃಷಿ ನಾಶಗೊಂಡಿದೆ.
ಸಮೀಪದ ಮುಂಡೂರುಪಳಿಕೆ, ಕೆಂಗುಡೇಲು, ಉಪ್ಪಾರಪಳಿಕೆ, ಪಟ್ರಮೆ ಗ್ರಾಮಸ್ಥರು ಜಾಗರೂಕರಾಗಿರುವಂತೆ ಸೂಚಿಸಲಾಗಿದೆ.


ಸೋಮವಾರ ಹಗಲು ಉಪ್ಪಿನಂಗಡಿ ಸಮೀಪದ ಬೆದ್ರೋಡಿ ವಳಾಲು ಬಜತ್ತೂರು ಪ್ರದೇಶದಲ್ಲಿ ಆನೆ ಕಾಣಿಸಿಕೊಂಡಿದೆ.
ಬಳಿಕ ರಾತ್ರಿಯ ಸಮಯ ಗೋಳಿತ್ತೊಟ್ಟು ಸಮೀಪದ ನೇರೆಂಕಿ ಮಲೆ ಕಾಡನ್ನು ಪ್ರವೇಶಿಸಿತ್ತು.

ಈಗ ಕೊಕ್ಕಡ‌ ಗ್ರಾಮದ ಪ್ರದೇಶಗಳಲ್ಲಿ ಕಾಣಿಸಿಕೊಂಡಿರುವ ಆನೆ ಇದೇ ಇರಬಹುದೆಂದು ಶಂಕಿಸಲಾಗಿದೆ.

Exit mobile version