Site icon Suddi Belthangady

ಕುಕ್ಕೇಡಿ: ಗೋಳಿಯಂಗಡಿ ಮಿನ್ಹಾಜುಲ್ ಹುದಾ ವತಿಯಿಂದ ರಂಝಾನ್ ಕಿಟ್ ವಿತರಣೆ

ಕುಕ್ಕೇಡಿ: ಗೋಳಿಯಂಗಡಿ ಮಿನ್ಹಾಜುಲ್ ಹುದಾ ಚಾರಿಟೇಬಲ್ ಟ್ರಸ್ಟ್ ವತಿಯಿಂದ ರಂಝಾನ್ ಪ್ರಯುಕ್ತ ಪ್ರತೀ ವರ್ಷ ನೀಡುತ್ತಿರುವ ಬಡ ಮತ್ತು ಅನಾಥರಿಗೆ ರಂಝಾನ್ ಕಿಟ್ ವಿತರಣೆಯನ್ನು ಮಾ.12ರಂದು 33 ಕುಟುಂಬಗಳಿಗೆ ನೀಡಲಾಯಿತು.

ಬದ್ರುದ್ದೀನ್ ಲತೀಫಿ ಅವರ ನೇತೃತ್ವದಲ್ಲಿ ನಡೆದ ಕಿಟ್ ವಿತರಣೆ ಕಾರ್ಯಕ್ರಮದಲ್ಲಿ ಸೆಯ್ಯಿದ್ ವಲೀದ್ ತಂಙಳ್ ಮಲಪ್ಪುರಂ, ಸೆಯ್ಯಿದ್ ಜಾಫರ್ ತಂಙಳ್, ಉಳ್ತೂರು ಮುದರಿಸ್ ಮುಹಮ್ಮದ್ ಫಾಳಿಲಿ ಅಲ್ ಕಾಮಿಲಿ, BJM ಗೋಳಿಯಂಗಡಿ ಖತೀಬ್ ಹನೀಫ್ ಬಾಹಸನಿ, ಫಾರೂಖ್ ಸಅದಿ, ಸೆಯ್ಯದ್ ಹಸನ್ ಉಳ್ತೂರು, ಅಬ್ಬಾಸ್ ಹಾಜಿ, ಅಬೂಸ್ವಾಲಿಹ್ ಮೂಡುಬಿದಿರೆ, ಅಬ್ದುಲ್ ಖಾದಿರ್ ಕೋಡಿಮಜಲ್, ಅಝೀಝುದ್ದೀನ್ ಕೋಡಿಮಜಲ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Exit mobile version