ಬೆಳ್ತಂಗಡಿ: ಕಂದಾಯ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ತಾಲೂಕು ಪಂಚಾಯತ್ ಬೆಳ್ತಂಗಡಿ, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಹಾಗೂ ಕೃಷಿ ಇಲಾಖೆ ಬೆಳ್ತಂಗಡಿ ಇದರ ಜಂಟಿ ಸಹಯೋಗದೊಂದಿಗೆ ವಿಶೇಷ ಚೇತನ ಫಲಾನುಭವಿಗಳಿಗೆ ತ್ರಿಚಕ್ರ ವಾಹನ, ಅರ್ಹ ಪಲಾನುಭವಿಗಳಿಗೆ 94ಸಿ ಹಕ್ಕು ಪತ್ರ, ಗ್ರಾಮೀಣ ಕುಶಲಕರ್ಮಿಗಳಿಗೆ ಉಚಿತ ಸುಧಾರಿತ ಉಪಕರಣ ಹಾಗೂ ಸಾಧನ ಸಲಕರಣೆ, ಕೃಷಿಕ ಫಲಾನುಭವಿಗಳಿಗೆ ಕೃಷಿ ಸಾಧನಾ ಸಲಕರಣೆ ವಿತರಣಾ ಕಾರ್ಯಕ್ರಮ ಮಾ.13ರಂದು ಲಾಯಿಲ ಸಂಗಮ ಸಭಾ ಭವನದಲ್ಲಿ ಜರಗಿತು.
ಶಾಸಕ ಹರೀಶ್ ಪೂಂಜಾ 94ಸಿ ಹಕ್ಕು ಪತ್ರ ಹಾಗೂ ಸವಲತ್ತುಗಳನ್ನು ವಿತರಣೆ ಮಾಡಿದರು.
ವಿಧಾನ ಪರಿಷತ್ ಶಾಸಕ ಪ್ರತಾಪಸಿಂಹ ನಾಯಕ್, ಗ್ರಾಮ ಪಂಚಾಯತ್ ಅಧ್ಯಕ್ಷರುಗಳಾದ ದಿನೇಶ್ ಗೌಡ ಬಂದಾರು, ಉಷಾ ಕಿರಣ್ ಕಾರಂತ್ ಉಜಿರೆ, ರತ್ನಾಕರ ಬುಣ್ಣಾನ್ ಮರೋಡಿ, ಆಶಾಲತ ಇಂದಬೆಟ್ಟು, ಶುಭಕರ ಸುಲ್ಕೆರಿ, ರಾಜವರ್ಮ ಜೈನ್ ನಾರಾವಿ, ಸುಗಂಧಿ ಲಾಯಿಲ, ಸವಿತಾ ಮೇಲಂತಬೆಟ್ಟು ಉಪಾಧ್ಯಕ್ಷ ಲೋಕನಾಥ, ಉಜಿರೆ ಉಪಾಧ್ಯಕ್ಷ ರವಿ ಕುಮಾರ್ ಬರಮೇಲು, ಕಳಿಯ ಉಪಾಧ್ಯಕ್ಷ ಇಂದಿರಾ, ಕಾರ್ಮಿಕ ಇಲಾಖೆಯ ಉಪನಿರ್ದೇಶಕ ಮಂಜುನಾಥ್, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ರಂಜಿತ್, ವಿವಿಧ ಇಲಾಖೆಯ ಅಧಿಕಾರಿಗಳು, ಫಲಾನುಭವಿಗಳು ಹಾಜರಿದ್ದರು.
ತಾಲೂಕು ಪಂಚಾಯತ್ ಕಾರ್ಯನಿರ್ವಾಹಣಾಧಿಕಾರಿ ಭವಾನಿ ಶಂಕರ್ ಸ್ವಾಗತಿಸಿ, ಕೃಷಿ ಅಧಿಕಾರಿ ಚಿದಾನಂದ ಹೂಗಾರ್ ವಂದಿಸಿದರು.ತಾಲೂಕು ಕಚೇರಿ ಸಿಬ್ಬಂದಿ ಹೇಮಾ ಕಾರ್ಯಕ್ರಮ ನಿರೂಪಿಸಿದರು.
ತಾಲೂಕಿನ ವಿವಿಧ ಗ್ರಾಮಗಳ 41 ಮಂದಿಗೆ 94ಸಿ ಹಕ್ಕುಪತ್ರ, ಲಾಯಿಲ ಗ್ರಾಮದ 7 ಮಂದಿಗೆ ನಿವೇಶನ ಮಂಜೂರಾತಿ ಪತ್ರ, 5 ಮಂದಿ ವಿಕಲ ಚೇತನರಿಗೆ ತ್ರೀಚಕ್ರ ವಾಹನ, 168 ಗ್ರಾಮೀಣ ಕುಶಲಕರ್ಮಿಗಳಿಗೆ ಸುಧಾರಿತ ಉಪಕರಣ, ಸಲಕರಣೆ, 17 ಮಂದಿ ಕೃಷಿಕರಿಗೆ ವಿವಿಧ ಸಾಧನ ಸಲಕರಣೆಯನ್ನು ಶಾಸಕ ಹರೀಶ್ ಪೂಂಜ ವಿತರಿಸಿದರು.