ಬೆಳ್ತಂಗಡಿ: ಹೋಲಿ ರೆಡಿಮಾರ್ ಶಾಲೆಯ ಆಡಿಟೋರಿಯಂ ನಲ್ಲಿ ಬೆಳ್ತಂಗಡಿ ಘಟಕದ ಸ್ತ್ರೀ ಸಂಘಟನೆಯ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಮಾ.10ರಂದು ಆಚರಿಸಲಾಯಿತು.
ಚರ್ಚಿನ ಎಲ್ಲಾ ಸ್ತ್ರೀಯರಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.
ಸ್ವಉದ್ಯೋಗದಲ್ಲಿ ನೆಲೆ ನಿಂತ ಸ್ತ್ರೀಯರನ್ನು ಸನ್ಮಾನಿಸಲಾಯಿತು.ಹೋಲಿ ರೆಡಿಮಾರ್ ಚರ್ಚಿನ ಪ್ರಧಾನ ಧರ್ಮ ಗುರುಗಳಾದ ವಂದನೀಯ ಫಾದರ್ ವಾಲ್ಟರ್ ಡಿಮೆಲ್ಲೋ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು.
ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ವಾಲ್ಟರ್ ಮೋನಿಸ್ ಹಾಗೂ ಕಾರ್ಯದರ್ಶಿ ಗಿಲ್ಬರ್ಟ್ ಪಿಂಟೋ, 21 ಆಯೋಗಗಳ ಸಂಚಾಲಕಿ ಪೌಲಿನ್ ರೇಗೋ, ಸ್ತ್ರೀ ಸಂಘಟನೆಯ ಸಚೇತಕಿ ಸಿಸ್ಟರ್ ಲೆತೀಷಿಯ, ಬ್ರದರ್ ಸಾಯಿಮನ್ ವೇದಿಕೆಯಲ್ಲಿ ಉಪಸ್ಥಿತರಿದ್ದು ಹಿತವಚನಗಳನ್ನು ನುಡಿದರು.
ಸ್ತ್ರೀ ಸಂಘಟನೆಯ ಅಧ್ಯಕ್ಷೆ ಸಿಲ್ವಿಯಾ ಪಿಂಟೋ ಬಂದಿರುವ ಅತಿಥಿಗಳನ್ನು ಸ್ವಾಗತಿಸಿದರು.
ಕಾರ್ಯದರ್ಶಿ ಸಿಲ್ವಿಯಾ ಕೊರ್ಡರೋ ವರದಿ ವಾಚಿಸಿದರು.ಉಪಾಧ್ಯಕ್ಷೆ ಅಪೋಲಿನ್ ಡಿಸೋಜರವರು ಎಲ್ಲರನ್ನು ವಂದಿಸಿದರು. ಶಾಂತಿಯವರು ಕಾರ್ಯಕ್ರಮವನ್ನು ನಿರೂಪಿಸಿದರು.ಸ್ತ್ರೀ ಸಂಘಟನೆಯ ಸದಸ್ಯರಿಂದ ಮನೋರಂಜನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.ಮಧ್ಯಾಹ್ನದ ಭೋಜನಾ ಕೂಟದೊಂದಿಗೆ ಕಾರ್ಯಕ್ರಮವನ್ನು ಸಮಾಪ್ತಿಗೊಳಿಸಲಾಯಿತು.