Site icon Suddi Belthangady

ಕುಪ್ಪೆಟ್ಟಿ ಶಾಲೆಯಲ್ಲಿ ಎಂಟನೇ ತರಗತಿ ವಿದ್ಯಾರ್ಥಿಗಳಿಗೆ ಬೀಳ್ಕೊಡುವ ಸಮಾರಂಭ

ಕುಪ್ಪೆಟ್ಟಿ: ಸ.ಉ.ಪ್ರಾ.ಶಾಲೆಯಲ್ಲಿ 2023-24ನೇ ಶೈಕ್ಷಣಿಕ ವರ್ಷದ 8ನೇ ತರಗತಿ ವಿದ್ಯಾರ್ಥಿಗಳು-ವಿದ್ಯಾರ್ಥಿನಿಯರಿಗೆ ಬೀಳ್ಕೊಡುಗೆ ಸಮಾರಂಭ ಹಮ್ಮಿಕೊಳ್ಳಲಾಗಿತ್ತು.

ವಿದ್ಯಾರ್ಥಿಗಳು ತಮ್ಮ ಶಾಲಾ ಅವಧಿಯಲ್ಲಿನ ಸವಿನೆನಪುಗಳನ್ನು ಮೆಲುಕು ಹಾಕಿದರು.ಶಾಲಾ ಪ್ರಭಾರ ಮುಖ್ಯೋಪಾಧ್ಯಾಯಿನಿ ವನಿತಾ, ಸಹಶಿಕ್ಷಕಿಯರಾದ ಪದ್ಮಾವತಿ, ರೀಟಾ ರೋಡ್ರಿಗಸ್, ರಶ್ಮೀ ಬಿ, ಶಬನ ಬಾನು, ಅತಿಥಿ ಶಿಕ್ಷಕಿ ದಿವ್ಯ ಲಕ್ಷ್ಮಿ, ಗೌರವ ಶಿಕ್ಷಕಿ ರಕ್ಷಿತಾ ರವರು ಮಕ್ಕಳಿಗೆ ಶುಭವನ್ನು ಹಾರೈಸಿದರು.

7ನೇ ತರಗತಿಯ ಮಕ್ಕಳು ಕಾರ್ಯಕ್ರಮವನ್ನು ಸಂಯೋಜಿಸಿದ್ದರು.

8ನೇ ತರಗತಿಯ ಮಕ್ಕಳು ಶಾಲೆಗೆ ಸೌಂಡ್ ಬಾಕ್ಸ್ ನ್ನು ಕೊಡುಗೆಯಾಗಿ ನೀಡಿದರು.

Exit mobile version