Site icon Suddi Belthangady

ಕೊಕ್ಕಡ ಹಾರದಲ್ಲಿ ನೆಲ್ಯಾಡಿ ಅಲ್ಫೋನ್ಸ ಚರ್ಚ್ ವತಿಯಿಂದ ಶ್ರಮದಾನ

ಕೊಕ್ಕಡ: ಕೊಕ್ಕಡ ಹಾರದಲ್ಲಿ ನೆಲ್ಯಾಡಿ ಸಂತ ಅಲ್ಫೋನ್ಸ ಪುಣ್ಯ ಕ್ಷೇತ್ರದ ವಿವಿದ ಸಂಘಟನೆಗಳ ಜಂಟಿ ಸಹಯೋಗದಲ್ಲಿ ಮಾ.8ರಂದು ಮನೆಯೊಂದನ್ನು ದುರಸ್ಥಿಗೊಳಿಸುವ ಕಾರ್ಯವನ್ನು ಯಶಸ್ವಿಯಾಗಿ ನಿರ್ವಹಿಸಲಾಯಿತು.

ಚರ್ಚ್ ನ ಸಂತ ಅಲ್ಫೋನ್ಸ ಸಂಡೆ ಸ್ಕೂಲ್, ಕರ್ನಾಟಕ ಸೀರೋಮಲಬಾರ್ ಕ್ಯಾಥೋಲಿಕ್ ಅಶೋಸಿಯೇಷನ್, ವಿನ್ಸೆಂಟ್ ಡಿ ಪೌಲ್ ಸೊಸೈಟಿ, ಭಾರತೀಯ ಕ್ಯಾಥೋಲಿಕ್ ಯುವ ಸಂಚಲನ, ಇದರ ಅದ್ಯಾಪಕರು ಹಾಗೂ ವಿದ್ಯಾರ್ಥಿಗಳು ಬೆಳಗ್ಗಿನಿಂದ ಮದ್ಯಾಹ್ನದವರೆಗಿನ ಸೇವಾ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಸಾಮಾಜಿಕ ಬದ್ಧತೆ, ಶುಭ ಸಂದೇಶದ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಲು ಇಂತಹ ಕಾರ್ಯಕ್ರಮಗಳು ಸಹಕಾರಿಯಾಗಲಿದೆ ಎಂದು ಧರ್ಮ ಗುರುಗಳಾದ ಶಾಜಿ ಮಾತ್ಯು ಸೇವಾನಿರತರನ್ನು ಅಭಿನಂದಿಸಿ ಹೇಳಿದರು.

Exit mobile version