ಧರ್ಮಸ್ಥಳ: ನಾ’ವುಜಿರೆ ಎಂದೇ ಚಿರಪರಿಚಿತರಾಗಿದ್ದ ನಾಗರಾಜ ಪೂವಣಿ ಅವರು ನಮ್ಮದೇ ಸಂಸ್ಥೆಯಾದ ಉಜಿರೆಯ ಶ್ರೀ ಸಿದ್ಧವನ ಗುರುಕುಲ, ಎಸ್.ಡಿ.ಎಂ.ಸೆಕೆಂಡರಿ ಶಾಲೆ (ಅಂದಿನ ಡಿ.ಕೆ.ವಿ. ಪ್ರೌಢಶಾಲೆ), ಎಸ್.ಡಿ.ಎಂ. ಕಾಲೇಜು ಮೊದಲಾದ ಸಂಸ್ಥೆಗಳಲ್ಲಿ ವಿವಿಧ ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಿಸಿ ನಮ್ಮ ಪ್ರೀತಿ-ವಿಶ್ವಾಸ, ಅಭಿಮಾನಕ್ಕೆ ಪಾತ್ರರಾಗಿದ್ದರು.
ಸರಳ ವ್ಯಕ್ತಿತ್ವವನ್ನು ಹೊಂದಿದ್ದ ಅವರು ನಮ್ಮ ಸಂಸ್ಥೆಗಳಲ್ಲಿ ದೊರಕಿದ ಎಲ್ಲಾ ಅವಕಾಶಗಳ ಸದುಪಯೋಗ ಪಡೆದು ತಮ್ಮ ಉಜ್ವಲ ಭವಿಷ್ಯವನ್ನು ರೂಪಿಸಿಕೊಂಡರು.
ನಾವು “ಮಂಜುವಾಣಿ” ಮಾಸಪತ್ರಿಕೆಯ ಪ್ರಕಾಶನ ಆರಂಭಿಸಿದಾಗ, ಉತ್ತಮ ಸೇವೆ ನೀಡಿದ್ದಾರೆ. ಅವರ ಸರಳ ವ್ಯಕ್ತಿತ್ವ, ಸೌಜನ್ಯಪೂರ್ಣ ಸೇವೆ, ನಮಗೆ ಸಂತೋಷ ಮತ್ತು ಅಭಿಮಾನವನ್ನು ಉಂಟುಮಾಡಿದೆ.
ಅವರ ಆತ್ಮಕ್ಕೆ ಚಿರಶಾಂತಿಯನ್ನು ಕೋರುತ್ತಾ ಅವರ ಅಗಲುವಿಕೆಯಿಂದ ಕುಟುಂಬವರ್ಗದವರಿಗೆ ಉಂಟಾದ ದುಃಖವನ್ನು ಸಹಿಸುವ ಶಕ್ತಿ-ತಾಳ್ಮೆಯನ್ನಿತ್ತು ಭಗವಾನ್ ಶ್ರೀ ಚಂದ್ರನಾಥ ಸ್ವಾಮಿ ಹಾಗೂ ಶ್ರೀ ಮಂಜುನಾಥ ಸ್ವಾಮಿ ಹರಸಲೆಂದು ಪ್ರಾರ್ಥಿಸುತ್ತೇನೆ ಎಂದು ಡಿ.ವೀರೇಂದ್ರ ಹೆಗ್ಗಡೆಯವರು ಸಂತಾಪ ಸೂಚಿಸಿದರು.