ಬೆಳ್ತಂಗಡಿ: ಎರಡನೇ ಮಹಾಯುದ್ಧದ ಸಂದರ್ಭ ಸಂತ್ರಸ್ತರಿಗೆ ಸಹಾಯ ಮಾಡುವ ಉದ್ದೇಶದಿಂದ 1917ರಲ್ಲಿ ಆರಂಭಗೊಂಡ ಲಯನ್ಸ್ ಸಂಸ್ಥೆ ಇಂದು 50 ಸಾವಿರ ಕ್ಲಬ್ಬುಗಳಾಗಿ, 200 ದೇಶಗಳಲ್ಲಿ 14 ಲಕ್ಷ ಸದಸ್ಯರನ್ನೊಳಗೊಂಡು ವಿಶದವ ವ್ಯಾಪ್ತಿಯಾಗಿದೆ.
ಪರಸ್ಪರ ಎಲ್ಲರೂ ಜೊತೆಯಾಗಿ ಸೇವೆ ಮಾಡುವುದೂ ಮಾತ್ರವಲ್ಲದೆ ಸಾಂಗತ್ಯ ಬೆಳೆಸಿಕೊಳ್ಳುವುದೇ ಇದರ ಮೂಲ ಗುರಿ ಎಂದು ಲಯನ್ಸ್ ಜಿಲ್ಲಾ ಸಿಕ್ಯೂಐ ಸಂಯೋಜಕ ಪ್ರಶಾಂತ್ ಶೆಟ್ಟಿ ಹೇಳಿದರು.
ಬೆಳ್ತಂಗಡಿ ಲಯನ್ಸ್ ಕ್ಲಬ್ ನಲ್ಲಿ ನಡೆದ ಕ್ಲಬ್ ಕ್ವಾಲಿಟಿ ಇನೀಶಿಯೇಟಿವ್ ಸೆಮಿನಾರ್ ನಲ್ಲಿ ಅವರು ಸಂಪನ್ಮೂಲ ಉಪನ್ಯಾಸ ನೀಡುತ್ತಿದ್ದರು.
ಅಧ್ಯಕ್ಷತೆಯನ್ನು ಲಯನ್ಸ್ ಕ್ಲಬ್ ಸುವರ್ಣ ಮಹೋತ್ಸವ ವರ್ಷದ ಅಧ್ಯಕ್ಷ ಉಮೇಶ್ ಶೆಟ್ಟಿ ವಹಿಸಿದ್ದರು.
ವಿಶೇಷ ಅತಿಥಿಯಾಗಿ ಜಿಲ್ಲಾ ಮಾಜಿ ರಾಜ್ಯಪಾಲ ರೊನಾಲ್ಡ್ ಗೋಮ್ಸ್ ಭಾಗಿಯಾಗಿದ್ದರು.ಪ್ರಾಂತ್ಯಾಧ್ಯಕ್ಷ ಹೆರಾಲ್ಡ್ ತಾವ್ರೋ, ತಾಲೂಕು ಕೋಶಾಧಿಕಾರಿ ಸುಭಾಷಿಣಿ, ನಿಕಟಪೂರ್ವ ಅಧ್ಯಕ್ಷ ಡಾ.ದೇವಿಪ್ರಸಾದ್ ಬೊಳ್ಮ ಉಪಸ್ಥಿತರಿದ್ದರು.
ದತ್ತಾತ್ರೇಯ ಗೊಲ್ಲ ಸಂಪನ್ಮೂಲ ವ್ಯಕ್ತಿಗಳ ಪರಿಚಯ ಮಂಡಿಸಿದರು.
ರವೀಂದ್ರ ಶೆಟ್ಟಿ ಬಳೆಂಜ ಪ್ರಾರ್ಥಿಸಿದರು. ಅಶ್ರಫ್ ಆಲಿಕುಂಞಿ ಮುಂಡಾಜೆ ಧ್ವಜವಂದನೆ ಹಾಗೂ ಬಿ.ಪಿ ಅಶೋಕ್ ನೀತಿ ಸಂಹಿತೆ ವಾಚಿಸಿದರು.
ಕೆ.ಕೃಷ್ಣ ಆಚಾರ್ ಕಾರ್ಯಕ್ರಮ ನಿರೂಪಿಸಿ, ಕ್ಲಬ್ ಕಾರ್ಯದರ್ಶಿ ಅನಂತಕೃಷ್ಣ ಧನ್ಯವಾದವಿತ್ತರು.