Site icon Suddi Belthangady

ಬೆಳ್ತಂಗಡಿ: ಅನುಗ್ರಹ ವೃದ್ಧಾಶ್ರಮದಲ್ಲಿ ವಿಮೆನ್ ಇಂಡಿಯಾ ಮೂವ್ಮೆಂಟ್ ಘಟಕದಿಂದ ಮಹಿಳಾ ದಿನಾಚರಣೆ

ಬೆಳ್ತಂಗಡಿ: ವಿಮೆನ್ ಇಂಡಿಯಾ ಮೂವ್ಮೆಂಟ್ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಬೆಳ್ತಂಗಡಿ ಅನುಗ್ರಹ ವೃದ್ದಾಶ್ರಮದಲ್ಲಿ ಆಚರಿಸಲಾಯಿತು.

ವೃದ್ಧಾಶ್ರಮದಲ್ಲಿ ಇರುವವರಿಗೆ ಆಹಾರ ಕಿಟ್ ನ್ನು ನೀಡಿ ಹಾಗೂ ಅವರೊಂದಿಗೆ ಸಮಯ ಕಳೆದು ವಿಶಿಷ್ಟ ರೀತಿಯಲ್ಲಿ ಮಹಿಳಾ ದಿನಾಚರಣೆಯನ್ನು ಆಚರಿಸಿದರು.ಈ ಸಂದರ್ಭದಲ್ಲಿ ಅನುಗ್ರಹ ಸಂಸ್ಥೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಈ ಕಾರ್ಯಕ್ರಮದಲ್ಲಿ ವಿಮೆನ್ ಇಂಡಿಯಾ ಮೂವ್ಮೆಂಟ್ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಅಧ್ಯಕ್ಷೆ ಶಮಾ ಆಲಿ ಉಜಿರೆ, ಕಾರ್ಯದರ್ಶಿ ನಸೀಮಾ ಬಿ.ಎ, ಉಪಾಧ್ಯಕ್ಷೆ ತಸ್ಲೀಮಾ ನವಾಝ್, ಕಾರ್ಯದರ್ಶಿ ಅಝ್ವಿನಾ ರಹೀಂ, ಕೋಶಾಧಿಕಾರಿ ಹಸೀನಾ ಬೆಳ್ತಂಗಡಿ, ಸಮಿತಿ ಸದಸ್ಯರಾದ ಸೌದಾ ಬಶೀರ್, ಮಿಸ್ರಿಯಾ, ಜೈನಾಬ್ ಉಸ್ಮಾನ್ ಮೊದಲಾದವರು ಭಾಗವಹಿಸಿದ್ದರು.

Exit mobile version