ಬಳಂಜ: ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿ ಬಳಂಜ, ಯುವ ಬಿಲ್ಲವ ವೇದಿಕೆ ಮಹಿಳಾ ಬಿಲ್ಲವ ವೇದಿಕೆಯ ಸಹಯೋಗದಲ್ಲಿ ಶ್ರೀ ಸತ್ಯನಾರಾಯಣ ಪೂಜೆ, ಗುರು ಪೂಜೆ,ಸರ್ವೇಶ್ವರಿ ದೇವಿಯ ಪೂಜೆ ಹಾಗೂ ಧಾರ್ಮಿಕ ಸಭೆಯು ಮಹಾ ಶಿವರಾತ್ರಿಯ ಶುಭ ದಿನ ಮಾ.8ರಂದು ಬಳಂಜ ಶ್ರೀ ನಾರಾಯಣ ಗುರು ಸಮುದಾಯ ಭವನದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ನಡೆದ ಧಾರ್ಮಿಕ ಸಭೆಯನ್ನು ತಾಲೂಕಿನ ನೆಚ್ಚಿನ ಶಾಸಕ ಹರೀಶ್ ಪೂಂಜಾ ಉದ್ಘಾಟಿಸಿ ಶುಭವನ್ನು ಹಾರೈಸಿದರು.ಸಭೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಸಂತೋಷ್ ಪಿ.ಕೋಟ್ಯಾನ್ ವಹಿಸಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಉಜಿರೆಯ ಉದ್ಯಮಿ ಮೋಹನ್ ಕುಮಾರ್, ವಸಂತ ಸಾಲಿಯಾನ್ ಕಾಪಿನಡ್ಕ, ಯುವವಾಹಿನಿ ಕೇಂದ್ರ ಸಮಿತಿ ಅಧ್ಯಕ್ಷ ಹರೀಶ್ ಕೆ.ನಾಗ ಕಲ್ಲುರ್ಟಿ ಕ್ಷೇತ್ರದ ಮುಖ್ಯಸ್ಥ ರಾಜೀವ್ ಮುಂಡುರು, ಉಳ್ಳಾಲ ಪುರಸಭೆ ಸದಸ್ಯ ಜಯ ಪೂಜಾರಿ, ಸುವರ್ಣ ಪ್ರತಿಷ್ಠಾನದ ಅಧ್ಯಕ್ಷ ಸಂಪತ್ ಸುವರ್ಣ, ಬಳಂಜ ಪಂಚಾಯತ್ ಅಧ್ಯಕ್ಷೆ ಶೋಭಾ ಕುಲಾಲ್, ಅಳದಂಗಡಿ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ರಾಕೇಶ್ ಹೆಗ್ಡೆ, ಜೆಸಿಐ ಬೆಳ್ತಂಗಡಿ ಅಧ್ಯಕ್ಷ ರಂಜಿತ್ ಎಚ್.ಡಿ., ಸಂಘದ ಗೌರವಾಧ್ಯಕ್ಷ ಎಚ್.ಧರ್ಣಪ್ಪ ಪೂಜಾರಿ, ಸಂಘದ ಕಾರ್ಯದರ್ಶಿ ಜಗದೀಶ್ ಯುವ ಬಿಲ್ಲವ ವೇದಿಕೆ ಅಧ್ಯಕ್ಷ ಶರತ್ ಅಂಚನ್, ಮಹಿಳಾ ಬಿಲ್ಲವ ವೇದಿಕೆ ಅಧ್ಯಕ್ಷರಾದ ಭಾರತಿ ಸಂತೋಷ್ ಉಪಸ್ಥಿತರಿದ್ದರು.
ಲೋಕಾಪಯೋಗಿ ಇಲಾಖೆಯ ಕಿರಿಯ ಇಂಜಿನಿಯರ್ ಆಗಿ ಸರಕಾರದಿಂದ ನೇಮಕಗೊಂಡ ಯುವ ಸಾಧಕ ಸೂರಜ್ ಪೂಜಾರಿ ಹಾಣಿಂಜ ಹಾಗೂ ಸಹಕಾರಿ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ ದಿನೇಶ್.ಪಿ.ಕೆ.ರಾಕೇಶ್ ಹೆಗ್ಡೆ, ದೇಜಪ್ಪ ಪೂಜಾರಿ, ಮಮತಾ ಕಟ್ಟೆ, ಗುರು ಪ್ರಸಾದ್ ಹೆಗ್ಡೆ ವಿಶ್ವನಾಥ ಹೊಳ್ಳ, ಹೇಮಂತ್ ಕಟ್ಟೆ ಹಾಗೂ ಸೋಮೇಶ್ವರ ಪುರಸಭೆಯ ಸದಸ್ಯರಾಗಿ ಆಯ್ಕೆ ಅದ ಜಯ ಪೂಜಾರಿ ಇವರನ್ನು ಶಾಸಕರು ಸಂಘದ ವತಿಯಿಂದ ಗೌರವಿಸಿದರು.
ಬ್ರಹ್ಮಶ್ರೀ ಕುಣಿತ ಭಜನಾ ಮಂಡಳಿ ಸದಸ್ಯರಿಂದ 200ನೇ ಭಜನಾ ಕಾರ್ಯಕ್ರಮ ನಡೆಯಿತು.ಸಂಚಾಲಕ ಹರೀಶ್ ವೈ.ಚಂದ್ರಮ ರವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಮಹಿಳಾ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಸರ್ವೇಶ್ವರಿ ದೇವಿಯ ಪೂಜೆಯಲ್ಲಿ ಭಾಗವಹಿಸಿದ್ದರು.
ಸಂಫದ ಅರ್ಚಕ ರಘುನಾಥ್ ಶಾಂತಿ ವೈದಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.ಚಂದ್ರಹಾಸ ಬಳಂಜ ಕಾರ್ಯಕ್ರಮ ನಿರೂಪಿಸಿದರು.ಪುಷ್ಪಾ ಗಿರೀಶ್ ಪ್ರಾರ್ಥಿಸಿದರು.