Site icon Suddi Belthangady

ಧರ್ಮಸ್ಥಳದ ಲತಾ ಆನೆ ಹೃದಯಾಘಾತದಿಂದ ಸಾವು

ಧರ್ಮಸ್ಥಳ: ಕಳೆದ 50 ವರ್ಷಗಳಿಂದ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಲತಾ(60ವ) ಎಂದೇ ಚಿರಪರಿಚಿತ ಆಗಿದ್ದ ಆನೆ ಹೃದಯಾಘಾತದಿಂದ ಇಂದು ಮಾ.8ರಂದು ಸಾವನಪ್ಪಿದೆ.

ಕಳೆದ 50 ವರ್ಷಗಳಲ್ಲಿ ಧರ್ಮಸ್ಥಳದ ಜಾತ್ರಾ ಮಹೋತ್ಸವಗಳಲ್ಲಿ ತನ್ನ ಗಾಂಭೀರ್ಯದ ಹೆಜ್ಜೆಯ ಮೂಲಕ ಲತಾ ಭಕ್ತರ ಗಮನವನ್ನು ಸೆಳೆದಿದ್ದಳು.

ಧರ್ಮಸ್ಥಳದಲ್ಲಿ ಈಗಿರುವ ಲಕ್ಷ್ಮೀ ಮತ್ತು ಶಿವಾನಿ ಆನೆಗಳು, ಲತಾ ಅಗಲುವಿಕೆಯಿಂದ ನೊಂದಿವೆ.

ಇಂದು ಸಂಜೆ ಧರ್ಮಸ್ಥಳದಲ್ಲಿ ಲತಾ ಆನೆಯ ಅಂತ್ಯಸಂಸ್ಕಾರ ನಡೆಯುವ ಸಾಧ್ಯತೆ ಇದೆ.

Exit mobile version