Site icon Suddi Belthangady

ಬೆಳ್ತಂಗಡಿ: ಅನುಗ್ರಹ ವೃದ್ಧಾಶ್ರಮ ನಿವಾಸಿಗಳೊಂದಿಗೆ ಮಹಿಳಾ ದಿನಾಚರಣೆ

ಬೆಳ್ತಂಗಡಿ: ಜಾಗತಿಕ ಮಹಿಳಾ ದಿನಾಚರಣೆಯ ಪ್ರಯುಕ್ತ ಸಂತ ಅಂತೋನಿ ಚರ್ಚ್ ನ ಸಂತ ತೆರೇಜಾ ಮಹಿಳಾ ಸಂಘಟನೆಯ ಸದಸ್ಯರು, ಬೆಳ್ತಂಗಡಿಯ ಸುದೇಮುಗೇರುವಿನ ಅನುಗ್ರಹ ವೃದ್ದಾಶ್ರಮಕ್ಕೆ ಭೇಟಿ ನೀಡಿ ಅಲ್ಲಿನ ನಿವಾಸಿಗಳೊಂದಿಗೆ ಮಹಿಳಾ ದಿನಾಚರಣೆ ಸಂಭ್ರಮವನ್ನು ಮಾ.8ರಂದು ಆಚರಿಸಲಾಯಿತು.

ಅಲ್ಲಿನ ನಿವಾಸಿಗಳಿಗೆ ಸಿಹಿಯನ್ನು ಹಂಚಿ, ಅವರಿಗೆ ಆಟಗಳನ್ನು ಆಡಿಸಿ, ಬಹುಮಾನಗಳನ್ನು ನೀಡಿ ಮನೋರಂಜಿಸಲಾಯಿತು.ಆಶ್ರಮದಲ್ಲಿರುವ ವೃದ್ಧೆಯರೊಂದಿಗೆ ಪ್ರೀತಿಯಿಂದ ಮಾತನಾಡಿ, ಆವರನ್ನು ಆಲಿಸಿ ಸಂತೋಷದ ಕ್ಷಣಗಳನ್ನು ಹಂಚಿಕೊಳ್ಳಲಾಯಿತು.

ಮಹಿಳಾ ಸಘಟನೆಯ ಎಲ್ಲಾ ಸದಸ್ಯರು ಒಟ್ಟು ಸೇರಿ ತಂದಿರುವ ನಗದು, ಅಡುಗೆ ಪದಾರ್ಥಗಳನ್ನು ಹಣ್ಣು-ಹಂಪಲು, ತಿಂಡಿ ತಿನಿಸು ಇತ್ಯಾದಿ ಸಾಮಾಗ್ರಿಗಳನ್ನು ಅವರಿಗೆ ಅರ್ಪಿಸಲಾಯಿತು.

ಈ ಸಂಭ್ರಮದಲ್ಲಿ ಮಹಿಳಾ ಸಂಘಟನೆಯ ಅಧ್ಯಕ್ಷೆ ವಿನ್ನಿ ಮರಿಯ, ಕಾರ್ಯದರ್ಶಿ ವೀಣಾ ಫೆರ್ನಾಂಡೀಸ್ ಹಾಗೂ 18 ಸದಸ್ಯರು ಉಪಸ್ಥಿತರಿದ್ದರು.

ಅನುಗ್ರಹ ವೃದ್ಧಾಶ್ರಮದ ಮುಖ್ಯಸ್ಥೆ ದೀಪಾ ಸ್ವಾಗತಿಸಿ, ಮಹಿಳಾ ದಿನಾಚರಣೆಯ ಶುಭಾಶಯ ಕೋರಿದರು.ಪಾವನ ರವರು ವಂದಿಸಿದರು.ಲವಿನ ಸಾಂತ್ಮ್ ಯೋರ್ ಕಾರ್ಯಕ್ರಮ ನಿರೂಪಿಸಿದರು.

Exit mobile version