Site icon Suddi Belthangady

ಮಾಚಾರು: ಬದನಾಜೆ ಶಾಲೆ ಹಿರಿಯ ವಿದ್ಯಾರ್ಥಿ ಸಂಘದ ಪುನಾರಚನೆ- ಅಧ್ಯಕ್ಷರಾಗಿ ರಾಮಯ್ಯ ಗೌಡ ಮಾಚಾರು, ಕಾರ್ಯದರ್ಶಿಯಾಗಿ ಸುರೇಶ್ ಮಾಚಾರು, ಕೋಶಾಧಿಕಾರಿಯಾಗಿ ರೋಶನ್ ಡಿ’ಸೋಜ ಆಯ್ಕೆ

ಮಾಚಾರು: ಇಲ್ಲಿನ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಬದನಾಜೆಯ ಹಿರಿಯ ವಿದ್ಯಾರ್ಥಿ ಸಂಘವನ್ನು ಮಾ.3ರಂದು ನಡೆದ ಶಾಲೆಯಲ್ಲಿ ನಡೆದ ಸಂಘದ ಸಭೆಯಲ್ಲಿ ಪುನಾರಚನೆ ಮಾಡಲಾಯಿತು.

ಸಂಘದ ನೂತನ ಅಧ್ಯಕ್ಷರಾಗಿ ರಾಮಯ್ಯ ಗೌಡ ಮಾಚಾರು, ಕಾರ್ಯದರ್ಶಿಯಾಗಿ ಸುರೇಶ್ ಮಾಚಾರ್, ಕೋಶಾಧಿಕಾರಿಯಾಗಿ ರೋಶನ್ ಡಿಸೋಜ, ಉಪಾಧ್ಯಕ್ಷೆ ನಾಗವೇಣಿ, ಸಂಘಟನಾ ಕಾರ್ಯದರ್ಶಿಯಾಗಿ ಪ್ರಕಾಶ್ಚಂದ್ರ ನಾಯ್ಕ ಆಯ್ಕೆಯಾದರು.

ಇದೇ ಸಂದರ್ಭದಲ್ಲಿ ಹಿರಿಯರಾದ ನಿವೃತ್ತ ಶಿಕ್ಷಕ ಬಾಬುಗೌಡ ಬಾಜಿಮಾರು ರವರನ್ನು ಸಂಘದ ಗೌರವಾಧ್ಯಕ್ಷರಾಗಿ ಆಯ್ಕೆ ಮಾಡಲಾಯಿತು.

ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ನಿಕಟಪೂರ್ವ ಅಧ್ಯಕ್ಷರಾದ ಮೋಹನ್ ಪಿ, ಕಾರ್ಯದರ್ಶಿಯಾದ ಗೋಪಾಲ್ ಮಾಸ್ಟರ್, ಎಚ್.ಬಿ.ಮೋಹನ್, ಬಿ.ಎಂ.ಇಲ್ಯಾಸ್, ಗುರುಪ್ರಸಾದ್ ಕೋಟ್ಯಾನ್, ಅನಿಲ್ ಡಿಸೋಜ, ಪಿತಾಂಬರ ಪೂಜಾರಿ, ಸುಂದರ ಬಂಗೇರ, ಸೋಮಶೇಖರ್ ಕೆ, ಮುರಳೀಧರ ಆಚಾರ್ಯ, ಸಂತೋಷ್ ಗೌಡ ಬದನಾಜೆ, ದೇವದಾಸ್ ಮುರ, ಹರಿಪ್ರಸಾದ್ ಪಾಲೆಂಜ, ಕೇಶವ ನಾಯ್ಕ, ಪ್ರಕಾಶ್ ಗೌಡ ಓರಾಲು, ಸುರೇಶ್ ಮಡಿವಾಳ್, ರಮೇಶ್ ಬೊಳ್ಳಿ, ಹಂಝ ಬಂಡಸಾಲೆ, ಸಂಜೀವ ನಾಯ್ಕ ಕಲ್ಲಾಜೆ, ಮಹಮ್ಮದ್ ಇಕ್ಬಾಲ್ ಮಾಚಾರ್, ಪುರುಷೋತ್ತಮ ಬಿ.ಎಸ್, ರಮೇಶ್ ನಾಯ್ಕ ಮಾಪಲ, ಕರುಣಾಕರ ಗೌಡ, ಮಂಜುಳ ಹಾಗೂ ಸ್ವಪ್ನ ಇವರನ್ನು ಆಯ್ಕೆ ಮಾಡಲಾಯಿತು.

ಈ ಸಂದರ್ಭದಲ್ಲಿ ಶಾಲಾ ಪ್ರಭಾರ ಮುಖ್ಯೋಪಾಧ್ಯಾಯಿನಿ ಲಲಿತ, ಸಹ ಶಿಕ್ಷಕಿ ಮಮತ ಹಾಗೂ ಬದನಾಜೆ ಪ್ರೌಢಶಾಲಾ ಶಿಕ್ಷಕ ಮಹದೇವ ಶೆಟ್ಟಿಯವರು ಉಪಸ್ಥಿತರಿದ್ದರು

Exit mobile version