ಧರ್ಮಸ್ಥಳ: ಮಾ.7ರಂದು ನಾರ್ಯ – ದೊಂಡೋಲೆ ಪರಿಸರದಲ್ಲಿ ರಾತ್ರಿ 8.00ರ ವೇಳೆಗೆ ನರೇಶ್ ದೇವಾಡಿಗ ರವರ ತೋಟದಲ್ಲಿ ಒಂಟಿ ಸಲಗ ಕಾಣಿಸಿಕೊಂಡಿದ್ದು, ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು.
ತಕ್ಷಣ ಸ್ಪಂದಿಸಿದ ಸಿಬ್ಬಂದಿಗಳು ರಾತ್ರಿ 8:30ರಿಂದ ಇಲಾಖಾ ವಾಹನದಲ್ಲಿ 11:30ರವರೆಗೆ ಗಸ್ತು ತಿರುಗಿ ಊರಿನವರು ಒಟ್ಟಾಗಿ ಸೇರಿ ಆನೆಯನ್ನು ಕಾಡಿಗೆ ಓಡಿಸುವ ಕಾರ್ಯಾಚರಣೆ ನಡೆಸಿದರು.
ಸ್ಥಳಕ್ಕೆ ಆಗಮಿಸಿದ ಸಿಬ್ಬಂದಿಗಳ ಮತ್ತು ಸಾರ್ವಜನಿಕರ ಜಂಟಿ ಕಾರ್ಯಾಚರಣೆಯಲ್ಲಿ ಪಟಾಕಿ ಮತ್ತು ಗಾಳಿಯಲ್ಲಿ ಗುಂಡು ಹಾರಿಸಿ ಒಂಟಿ ಸಲಗವನ್ನು ಕಾಡಿಗೆ ಓಡಿಸುವಲ್ಲಿ ಯಶಸ್ವಿಯಾದರು.
ಈ ಕಾರ್ಯಾಚರಣೆಯಲ್ಲಿ ಉಜಿರೆ ಶಾಖೆ ಅರಣ್ಯಾಧಿಕಾರಿ ಹರಿಪ್ರಸಾದ್, ಧರ್ಮಸ್ಥಳ ಗಸ್ತು ಅರಣ್ಯ ಪಾಲಕರು ಸಂತೋಷ್ ರಾತ್ರಿ ಗಸ್ತು ತಂಡದ ಗಸ್ತು ಅರಣ್ಯ ಪಾಲಕ ಸತೀಶ್ ಡಿಸೋಜ, ಉಜಿರೆ ಅರಣ್ಯ ವೀಕ್ಷಕ ಸದಾನಂದ, ಇಲಾಖಾ ವಾಹನ ಚಾಲಕ ಕುಶಾಲಪ್ಪ ಗೌಡ, ವಲಯ ಅರಣ್ಯ ಅಧಿಕಾರಿ ಮೋಹಬ್ ಕುಮಾರ್ ಮಾರ್ಗದರ್ಶನ ಮತ್ತು ಸ್ಥಳೀಯರಾದ ಮೋಹನ್ ಗೌಡ ಅರಿಕೋಡಿ, ಯೋಗಿಶ್ ಪೂಜಾರಿ ಅನೇಕ್ಕಲ, ಪ್ರಸಾದ್ ಗೌಡ, ಕಿಶೋರ್ ಗೌಡ, ಅಜಿತ್, ದಯಾನಂದ ನಾರ್ಯ, ಹರೀಶ್ ಬರಮೇಲು , ರಾಮಕೃಷ್ಣ ಅರಿಕೋಡಿ , ದಿನೇಶ್ ಪುತ್ತಿಲ ,ಹಾಗೂ ಇತರರು ಪಾಲ್ಗೊಂಡಿದ್ದರು.
ರಾತ್ರಿ ನಿರಂತರ 3 ಗಂಟೆಗಳ ಕಾರ್ಯಾಚರಣೆ ನಡೆಸಿ ಅರಣ್ಯಕ್ಕೆ ಓಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆದರು ಜನರು ಮುಂಜಾಗ್ರತೆಯಿಂದ ಇರಬೇಕು ಎಂದು ತಿಳಿಸಿದ್ದಾರೆ.