ಬಳಂಜ: ಪ್ರತಿಷ್ಠಿತ ಬ್ರಹ್ಮಶ್ರೀ ಕುಣಿತ ಭಜನಾ ಮಂಡಳಿ ಸದಸ್ಯರಿಂದ ಬಳಂಜ ಸರಕಾರಿ ಪ್ರೌಢ ಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಪೆನ್ನು ವಿತರಣೆ ಕಾರ್ಯಕ್ರಮವು ಮಾ.6ರಂದು ನಡೆಯಿತು.
ಮಂಡಳಿಯ ಪ್ರಧಾನ ಸಂಚಾಲಕರಾದ ಹರೀಶ್ ವೈ ಚಂದ್ರಮ ಇವರ ನೇತೃತ್ವದಲ್ಲಿ ಬ್ರಹ್ಮಶ್ರೀ ಕುಣಿತ ಭಜನಾ ಮಂಡಳಿಯು ಈಗಾಗಲೇ ಕರ್ನಾಟಕ ರಾಜ್ಯ ಮಾತ್ರವಲ್ಲದೆ ಹೊರ ರಾಜ್ಯದಲ್ಲೂ ಕಾರ್ಯಕ್ರಮಗಳನ್ನು ನೀಡಿ ಜನ ಮೆಚ್ಚುಗೆಯನ್ನ ಪಡೆದಿದ್ದು ಸ್ಥಳೀಯವಾಗಿ ಹಲವಾರು ಸಮಾಜಮುಖಿ ಸೇವೆಯನ್ನು ಮಾಡುತ್ತಿದೆ.
ಎರಡು ವರ್ಷಗಳ ಹಿಂದೆ ಜನರನ್ನು ಕಾಡಿದ ಮಹಾಮಾರಿ ಕೊರೊನ ವೈರಸ್ ಸಂದರ್ಭದಲ್ಲಿ ಬಡ ಕುಟುಂಬಗಳನ್ನು ಗುರುತಿಸಿ ಅಕ್ಕಿ ಮತ್ತು ಜಿನಸಿ ಸಾಮಗ್ರಿಗಳನ್ನು ಗರಿಷ್ಠ ಮಟ್ಟದಲ್ಲಿ ವಿತರಿಸಿದ ಹಿರಿಮೆ ಹರೀಶ್ ವೈ ಚಂದ್ರಮ ಮತ್ತು ಮಂಡಳಿಗೆ ಸಲ್ಲುತ್ತದೆ.
ಇದೀಗ ಮಂಡಳಿಯು ಮಹಾ ಶಿವರಾತ್ರಿಯ ಸಂದರ್ಭದಲ್ಲಿ 200ನೇ ಭಜನಾ ಕಾರ್ಯಕ್ರಮವನ್ನು ನೀಡುತ್ತಿದ್ದು ಇದರ ಅಂಗವಾಗಿ ಸರಕಾರಿ ಶಾಲಾ ವಿದ್ಯಾರ್ಥಿಗಳಿಗೆ ಸ್ಫೂರ್ತಿ ತುಂಬಲು ಪೆನ್ನು ವಿತರಣೆ ಮಾಡಿರುವುದು ಶ್ಲಾಘನೀಯವಾಗಿದೆ ಎಂದು ಬಳಂಜ ಶಾಲಾ ಮುಖ್ಯೋಪಾದ್ಯಾಯರು ಹಾಗೂ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರು ಅಭಿಪ್ರಾಯ ಪಟ್ಟಿದ್ದಾರೆ.