ಬಂಗಾಡಿ: ಬಂಗಾಡಿ ಸೀಮೆಯ ಇತಿಹಾಸ ಪ್ರಸಿದ್ಧ ದೇವನಾರಿ ಶ್ರೀ ಅರ್ಧನಾರೀಶ್ವರ ದೇವಸ್ಥಾನದಲ್ಲಿ ಮಹಾ ಶಿವರಾತ್ರಿ ಉತ್ಸವವು ಮಾ. 08ರಂದು ಕ್ಷೇತ್ರದಲ್ಲಿ ವಿಜೃಂಭಣೆಯಿಂದ ನಡೆಯಲಿದೆ.
ಬೆಳಿಗ್ಗೆ 5.00 ಗಂಟೆ ಶಿವ ಸಹಸ್ರನಾಮ ಪಠಣ, ಬೆಳಿಗ್ಗೆ 6.00 ಗಂಟೆಗೆ ಶಿವರಾತ್ರಿ ವಿಶೇಷ ದೇವರಿಗೆ ಮೊದಲ ಯಾಮಾದ ಪೂಜೆ ನಡೆಯಲಿದೆ.ಸಂಜೆ 5.00 ಗಂಟೆಗೆ ಸರಿಯಾಗಿ ಇಂದಬೆಟ್ಟು, ನಾವೂರು, ಕಡಿರುದ್ಯಾವರ, ಮಿತ್ತಬಾಗಿಲು, ಮಲವಂತಿಗೆ, ನಡ-ಕನ್ಯಾಡಿ ಗ್ರಾಮದ ಭಕ್ತಾದಿಗಳಿಂದ ಶಿವನಾಮ ಸಂಕೀರ್ತನೆ ಯೊಂದಿಗೆ ಶ್ರೀ ಕ್ಷೇತ್ರಕ್ಕೆ ಪಾದಯಾತ್ರೆ ನಡೆಯಲಿದೆ.
ಸಂಜೆ ಶ್ರೀ ಕ್ಷೇತ್ರದಲ್ಲಿ ವಿಶೇಷ ಏಕಾದಶ ರುದ್ರಾಭಿಷೇಕ, ರಂಗಪೂಜೆ, ವಿವಿಧ ಭಜನಾ ತಂಡಗಳಿಂದ ಭಕ್ತಿಗಾಯನ ಕಮ್ಮಟ ಭಜನೆ ನಡೆಯಲಿದೆ.ರಾತ್ರಿ ಭಕ್ತಾದಿಗಳಿಂದ ಆಹೋರಾತ್ರಿ ಜಾಗರಣೆ ನಡೆಯಲಿದೆ.
ಶಿವರಾತ್ರಿಯ ವಿಶೇಷ ದೇವರಿಗೆ ಯಾಮಾದ ಪೂಜೆಯು ಬೆಳಿಗ್ಗೆ 6.00, 9.00, ಮಧ್ಯಾಹ್ನ 12.00, 3.00, ಸಂಜೆ 6.00, 9.00, ಮಧ್ಯರಾತ್ರಿ 12.00, 3.00 ಹಾಗೂ ಉಷಾಕಾಲ 6.00 ಗಂಟೆಗೆ ನಡೆಯಲಿದೆ.
ಈ ಎಲ್ಲಾ ದೇವತಾ ಕಾರ್ಯಕ್ರಮಗಳಲ್ಲಿ ಭಗವಧ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ದೇವತಾನುಗ್ರಕೆ ಪಾತ್ರರಾಗಬೇಕಾಗಿ ವಿನಂತಿ.