Site icon Suddi Belthangady

ಕುವೆಟ್ಟು: ಮದ್ದಡ್ಕ ದಿನಸಿ ಅಂಗಡಿ ವ್ಯಾಪಾರಿ ವಿಶ್ವನಾಥ್ ಶೆಣೈ ನಿಧನ

ಕುವೆಟ್ಟು: ಮದ್ದಡ್ಕ ದಿನಸಿ ಅಂಗಡಿ ವ್ಯಾಪಾರಿ ವಿಶ್ವನಾಥ್ ಶೆಣೈ(ಅಂಬು) 65ವರ್ಷ ಮಾ.6ರಂದು ಅಸೌಖ್ಯದಿಂದ ಆಸ್ಪತ್ರೆಗೆ ತೆರಲುವಾಗ ದಾರಿ ಮಧ್ಯದಲ್ಲಿ ನಿಧನರಾದರು.

ಮೃತರು ಪತ್ನಿ ವಿದ್ಯಾವತಿ ಮತ್ತು 1 ಗಂಡು, 1 ಹೆಣ್ಣು ಮಕ್ಕಳನ್ನು, ಸಹೋದರರು, ಸಹೋದರಿಯರನ್ನು ಕುಟುಂಬಸ್ಥರನ್ನು ಅಗಲಿದ್ದಾರೆ.

ಮೃತರು ಸಹೋದರ ಮಂಜುನಾಥ ಶೆಣೈ ರವರೊಂದಿಗೆ ಹಲವು ವರ್ಷಗಳಿಂದ ಮದ್ದಡ್ಕ ಪೇಟೆಯಲ್ಲಿ ದಿನಸಿ ವ್ಯಾಪಾರ ಮಾಡುತ್ತಿದ್ದರು.

ಮದ್ದಡ್ಕ ಪೇಟೆಯ ವ್ಯಾಪಾರಸ್ಥರು ಊರಿನ ಗಣ್ಯರು ಬಂದು ಬಳಗದವರು ಅಂತಿಮ ನಮನ ಸಲ್ಲಿಸಿದರು.

Exit mobile version