Site icon Suddi Belthangady

ಉಜಿರೆ: ಅನುಗ್ರಹ ಆಂ.ಮಾ ಶಾಲೆಯಲ್ಲಿ ದೀಪ ಪ್ರದಾನ ಕಾರ್ಯಕ್ರಮ

ಉಜಿರೆ : ಅನುಗ್ರಹ ಆಂಗ್ಲ ಮಾಧ್ಯಮ ಶಾಲೆಯ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆಯ ಅಂಗವಾಗಿ ದೀಪ ಪ್ರಧಾನ ಕಾರ್ಯಕ್ರಮವು ಮಾ.6ರಂದು ಶಾಲಾ ಸಭಾಭವನದಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಸಂಚಾಲಕರಾದ ಫಾ.ಜೇಮ್ಸ್ ಡಿಸೋಜ ರವರು ವಹಿಸಿ ವಿದ್ಯಾರ್ಥಿಗಳಿಗೆ ತಮ್ಮ ಮುಂದಿನ ಜೀವನಕ್ಕೆ ಶುಭ ಹಾರೈಸಿದರು.

ಪ್ರಾಂಶುಪಾಲ ಫಾ.ವಿಜಯ್ ಲೋಬೊ ರವರು ವಿದ್ಯಾರ್ಥಿಗಳು ಸಮಾಜದ ದೀಪಗಳಾಗಿ ಬೆಳಗುವಂತೆ ಕರೆಯಿತ್ತರು.

ವಿದ್ಯಾರ್ಥಿಗಳು ಜಗತ್ತಿನ ಬೆಳಕಾಗುವಂತೆ ದೀಪ ಪ್ರಧಾನ ಮಾಡಲಾಯಿತು.9ನೇ ತರಗತಿಯ ವಿದ್ಯಾರ್ಥಿ ರಕ್ಷಾ ಎಲ್ಲಾ ಕಿರಿಯ ವಿದ್ಯಾರ್ಥಿಗಳ ಪರವಾಗಿ ಶುಭ ಹಾರೈಸಿದರು.

ಕಿರಿಯ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಮನೋರಂಜನಾ ಕ್ರೀಡೆಗಳನ್ನು ನಡೆಸಿಕೊಟ್ಟರು.ವಿಜೇತರಾದ ಎಲ್ಲಾ ವಿದ್ಯಾರ್ಥಿಗಳಿಗೆ ಬಹುಮಾನ ಹಾಗೂ ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಸಂಸ್ಥೆಗೆ 10ನೇ ತರಗತಿಯ ವಿದ್ಯಾರ್ಥಿಗಳು LCD Projector ಅನ್ನು ಕಾಣಿಕೆಯಾಗಿ ನೀಡಿದರು.

ಗಾಯಾನ ನಿರೂಪಿಸಿ, ನಿಮಾಲ್ ಜೋಸ್ ಸ್ವಾಗತಿಸಿ, ಮಹಮ್ಮದ್ ರಿಹಾನ್ ವಂದಿಸಿದರು.

Exit mobile version