Site icon Suddi Belthangady

ಮಾ.4-7: ಇಂದಬೆಟ್ಟು ಕುತ್ರೊಟ್ಟು ಬಂಗಾಡಿ ಹಾಡಿದೈವ ಉಳ್ಳಾಕುಳ ಕ್ಷೇತ್ರದಲ್ಲಿ ಚಂಡಿಕಾ ಯಾಗ ಹಾಗೂ ವರ್ಷಾವಧಿ ಜಾತ್ರೆ

ಇಂದಬೆಟ್ಟು: ಕುತ್ರೊಟ್ಟು ಬಂಗಾಡಿ ಹಾಡಿದೈವ ಉಳ್ಳಾಕುಳ ಕ್ಷೇತ್ರದಲ್ಲಿ ಚಂಡಿಕಾ ಯಾಗ ಹಾಗೂ ವರ್ಷಾವಧಿ ಜಾತ್ರೆಯು ಮಾ.4ರಿಂದ ಪ್ರಾರಂಭಗೊಂಡು ಮಾ.7ರವರೆಗೆ ವೇದಮೂರ್ತಿ ಶ್ರೀಕಾಂತ ಭಟ್ ಬೆಳುವಾಯಿ ಇವರ ಪೌರೋಹಿತ್ಯದಲ್ಲಿ ನಡೆಯಲಿದೆ.

ಮಾ.4ರಂದು ಗ್ರಾಮಸ್ಥರಿಂದ ಹೊರೆಕಾಣಿಕೆ ಸಮರ್ಪಣೆ, ತೊಡರ ಬಲಿ, ಉಗ್ರಾಣ ಮೂಹೂರ್ತ ನಡೆಯಿತು. ಮಾ.5ರಂದು ಬೆಳಿಗ್ಗೆ ಉಳ್ಳಾಕುಳ ಸನ್ನಿಧಿಯಲ್ಲಿ ನವಕ ಕಲಶ, ಪ್ರಧಾನ ಹೋಮ, ಧ್ವಜಾರೋಹಣ, ಕಲಶಾಭಿಷೇಕ, ಪಂಚವರ್ಣ ಸಂಕ್ರಾತಿ 12 ತೆಂಗಿನಕಾಯಿಗಳ ಗಣಹೋಮ, ಚಂಡಿಕಾ ಯಾಗ, ಮಹಾಪೂಜೆ, ರಾತ್ರಿ ಉಳ್ಳಾಳ್ತಿ ಸನ್ನಿಧಿಯಲ್ಲಿ ಹೂವಿನ ಪೂಜೆ, ಉಳ್ಳಾಯ-ಉಳ್ಳಾಲ್ತಿ ನೇಮೋತ್ಸವ ನಡೆಯಿತು.

ಈ ಸಂದರ್ಭದಲ್ಲಿ ಅನುವಂಶಿಕ ಅಸ್ರಣ್ಣರು ಮತ್ತು ಪ್ರಧಾನ ಅರ್ಚಕ ಎಸ್.ಗೋಪಾಲಕೃಷ್ಣ ಉಪಾಧ್ಯಾಯ, ಆಡಳಿತ ಅಧಿಕಾರಿ ಗಿರಿಯಪ್ಪ ಗೌಡ ಹಾಗೂ ಊರಿನ ಗ್ರಾಮಸ್ಥರು ಉಪಸ್ಥಿತರಿದ್ದರು.

ಮಾ.6 ಬೆಳಿಗ್ಗೆ ಪಂಚಪರ್ವ ಸಂಕ್ರಾಂತಿ, ಶ್ರೀ ನಾಗ ದೇವರ ಸನ್ನಿಧಿಯಲ್ಲಿ ಸಾಮೂಹಿಕ ಆಶ್ಲೇಷಾ ಬಲಿ, ನಾಗತಂಬಿಲ, ರಾತ್ರಿ ಉಳ್ಳಾಳ್‌ ಸನ್ನಿಧಿಯಲ್ಲಿ ಹೂವಿನ ಪೂಜೆ, ರಾತ್ರಿ, 10 ರಿಂದ ಭೈರವ ಪಿಲಿಚಾವಂಡಿ ಮೂರ್ತಿಲ್ಲಾಯ ದೈವಗಳ ನೇಮ ನಂತರ ಧ್ವಜಾರೋಹಣ ನಡೆಯಲಿದೆ.

ಮಾ.7ರಂದು ರಾತ್ರಿ 8:00ರಿಂದ ಕಲ್ಕುಡ , ಕಲ್ಲುರ್ಟಿ, ಕಾಳಮ್ಮ ದೈವಗಳ ನೇಮ ನಡೆಯಲಿದೆ.

Exit mobile version