ಧರ್ಮಸ್ಥಳ: ಧರ್ಮಸ್ಥಳ ಗ್ರಾಮ ಪಂಚಾಯತ್ ನಲ್ಲಿ ವಿಶ್ವ ಮಹಿಳಾ ದಿನಾಚರಣೆಯನ್ನು ಪಂಚಾಯತ್ ನ ನೇತ್ರಾವತಿ ಸಭಾಂಗಣದಲ್ಲಿ ಮಾ.5ರಂದು ನಡೆಯಿತು.
ವೇದಿಕೆಯಲ್ಲಿರುವ ಗಣ್ಯರಿಂದ ಕಾರ್ಯಕ್ರಮ ಉದ್ಘಾಟಿಸಿದರು.
ಸಂಪನ್ಮೂಲ ವ್ಯಕ್ತಿಯಾಗಿ ಉಜಿರೆಯ ದಂತ ವೈದ್ಯೆ ಡಾ.ದೀಪಾಲಿ ಡೋಂಗ್ರೆ ಯವರು ಮಹಿಳೆಯರ ಮಾನಸಿಕ ಆರೋಗ್ಯದ ಬಗ್ಗೆ ಮನಮುಟ್ಟುವಂತೆ, ಜೀವನದಲ್ಲಿ ಅಳವಡಿಸಿಕೊಳ್ಳುವಂತಹ ಮಾಹಿತಿಯನ್ನು ನೀಡಿದರು.
ಆರ್ಥಿಕ ಸಮಾಲೋಚಕಿ ಉಷಾ ಆರ್ಥಿಕ ಸಬಲೀಕರಣದ ಬಗ್ಗೆ, ಸ್ವ ಸಹಾಯ ಸಂಘದ ಮಹಿಳೆಯರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳ ಬಗ್ಗೆ ತಿಳಿಸಿದರು.
ಎನ್ ಆರ್ ಎಲ್ ಮ್ ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕಿ ಪ್ರತಿಮಾ ಸಂಜೀವಿನಿ ತಾಲೂ ಮಟ್ಟದ ಒಕ್ಕೂಟದ ಮಹಿಳೆಯರ ಯಶೋಗಾಥೆಗಳನ್ನು ತಿಳಿಸಿದರು.
ಈ ಸಂದರ್ಭದಲ್ಲಿ ಬೆನಕ ಸಂಜೀವಿನಿ ಸಂಘದ ಸದಸ್ಯರು ತಯಾರಿಸಿದ ದೇಶೀಯ ಮಸಾಲವಾದ ಬೆನಕ ಸಾಂಬಾರ್ ಮಸಾಲ, ಬೆನಕ ಚಿಕನ್ ಮಸಾಲ ಇದನ್ನು ಶುಭಾರಂಭಗೊಳಿಸಲಾಯಿತು.
ಈ ದಿನ ನಮ್ಮ ಒಕ್ಕೂಟದಲ್ಲಿ ಕೆಲವೊಂದು ಚಟುವಟಿಕೆಗಳ ಮೂಲಕ ಮಾದರಿಯಾಗಿರುವ ಗೀತಾ, ಮಮತಾ, ಪುಷ್ಪಾ, ಕೃಷ್ಣವೇಣಿ ಇವರನ್ನು ಸನ್ಮಾನಿಸಲಾಯಿತು.ಕೆಲವು ಸ್ಪರ್ಧೆಗಳನ್ನು ನಡೆಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಧರ್ಮಸ್ಥಳ ಗ್ರಾಮ ಪಂಚಾಯತ್ ಅಧ್ಯಕ್ಷೆ ವಿಮಲ, ಉಪಾಧ್ಯಕ್ಷ ಪಿ. ಶ್ರೀನಿವಾಸ ರಾವ್, ಒಕ್ಕೂಟದ ಅಧ್ಯಕ್ಷೆ ರಮ್ಯಾ, ಗೊಂಚಲು ಸಮಿತಿಯ ಅಧ್ಯಕ್ಷೆ ಯೋಗಿನಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಉಮೇಶ್ ಕೆ.,ಲೆಕ್ಕ ಸಹಾಯಕಿ ಪ್ರಮೀಳಾ , ಎನ್ ಎಲ್ ಎಲ್ ಎಂ ವಲಯ ಮೇಲ್ವಿಚಾರಕಿ ವೀಣಾಶ್ರೀ ಪಂಚಾಯತ್ ಸಿಬ್ಬಂದಿಗಳು, ಒಕ್ಕೂಟದ ಪದಾಧಿಕಾರಿಗಳು, ಗೊಂಚಲು ಸಮಿತಿಯ ಪದಾಧಿಕಾರಿಗಳು, ಎಂ.ಬಿ.ಕೆ, ಎಲ್ ಸಿ ಆರ್ ಪಿ, ಕೃಷಿ ಸಖಿ, ಪಶು ಸಖಿ, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಸ್ತ್ರೀ ಶಕ್ತಿ ಸಂಜೀವಿನಿ ಸಂಘದ ಸದಸ್ಯರುಗಳು ಉಪಸ್ಥಿತರಿದ್ದರು.
ಎಂ.ಬಿ.ಕೆ ಚಂದ್ರಾವತಿ ನಿರೂಪಿಸಿ, ಒಕ್ಕೂಟದ ಕಾರ್ಯದರ್ಶಿ ಧನಲಕ್ಷ್ಮೀ ಸ್ವಾಗತಿಸಿದರು.ಎಲ್.ಸಿ.ಆರ್.ಪಿ ಪುಷ್ಪಾವತಿ ವಂದಿಸಿದರು.