Site icon Suddi Belthangady

ಡಿ.ಕೆ.ಆರ್.ಡಿ.ಎಸ್ ಮಾಸಿಕ ಬೆಂಬಲ ಸಭೆ ಹಾಗೂ ಮಾಹಿತಿ ಕಾರ್ಯಕ್ರಮ

ಬೆಳ್ತಂಗಡಿ: ಡಿ.ಕೆ.ಆರ್.ಡಿ.ಎಸ್ ನವಜೀವನ ಆರೈಕೆ ಮತ್ತು ಬೆಂಬಲ ಕೇಂದ್ರದ ನೇತೃತ್ವದಲ್ಲಿ ಹೆಚ್.ಐ.ವಿ/ಏಡ್ಸ್ ಸೋಂಕಿತ ಹಾಗೂ ಬಾಧಿತ ವ್ಯಕ್ತಿಗಳ ಮಾಸಿಕ ಬೆಂಬಲ ಸಭೆ ಮತ್ತು ಮಾಹಿತಿ ಕಾರ್ಯಕ್ರಮವು ಬೆಳ್ತಂಗಡಿ ಸಾಂತೋಮ್ ಟವರ್ ನಲ್ಲಿ ಆಯೋಜಿಸಲಾಗಿತ್ತು.

ಬೆಳ್ತಂಗಡಿ ಗಂಗಾ ಯಮುನಾ ಮಾರ್ಕೆಟಿಂಗ್ ಇದರ ಮಾಲಕ ಲಕ್ಷ್ಮಣ್ ಶೆಟ್ಟಿಯವರು ಪೌಷ್ಟಿಕ ಆಹಾರ ವಿತರಿಸಿ ಧೈರ್ಯo ಸರ್ವತ್ರ ಸಾಧನo ಜೀವನದಲ್ಲಿ ಬರುವ ಕಷ್ಟದ ವಿರುದ್ಧ ದೈರ್ಯವಾಗಿ ಹೋರಾಡಬೇಕು ಎಂದು ಶುಭ ಹಾರೈಸಿದರು.ಪುಷ್ಪರಾಜ್ ರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಡಿ.ಕೆ.ಆರ್.ಡಿ.ಎಸ್ ಸಂಸ್ಥೆಯ ನಿರ್ದೇಶಕ ವಂದನೀಯ ಫಾದರ್ ಬಿನೋಯಿ ಎ.ಜೆ. ಜಾತಿ ಬೇಧ ಭಾವ ಇಲ್ಲದೆ ಮನುಷ್ಯತ್ವದ ನೆಲೆಯಲ್ಲಿ ನಡೆಸಲ್ಪಡುವ ಕಾರ್ಯಕ್ರಮ ಇದಾಗಿದೆ ಎಂದು ಪ್ರಾಸ್ತಾವಿಕವಾಗಿ ಮಾತನಾಡಿದರು.

ನವಜೀವನ ಆರೈಕೆ ಮತ್ತು ಬೆಂಬಲ ಕೇಂದ್ರದ ಸದಸ್ಯೆ ಶಾರದರವರು ಪ್ರಾರ್ಥನೆ ಹಾಡಿದರು.ಕಾರ್ಯಕರ್ತ ಮಾರ್ಕ್ ಡಿ ಸೋಜರವರು ಎಲ್ಲರನ್ನು ಸ್ವಾಗತಿಸಿ, ಡಿ.ಕೆ.ಆರ್.ಡಿ.ಎಸ್ ವಿದ್ಯಾನಿಧಿ ಕಾರ್ಯಕ್ರಮದ ಸಂಯೋಜಕ ಥೋಮಸ್ ರವರು ವಂದಿಸಿದರು.

ನವಜೀವನ ಆರೈಕೆ ಮತ್ತು ಬೆಂಬಲ ಕಾರ್ಯಕ್ರಮದ ಸದಸ್ಯನಾದ ಕುಮಾರ್ ಸುಹಾಸ್ ಹೆಗ್ಡೆರವರು ಕಾರ್ಯಕ್ರಮ ನಿರೂಪಿಸಿದರು.

ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾತು.

Exit mobile version