Site icon Suddi Belthangady

ಕುಕ್ಕೇಡಿ: ಆದಿದ್ರಾವಿಡ ಸಮಾಜ ಬಾಂಧವರ ಅಂತರ್‌ ಜಿಲ್ಲಾ ಮಟ್ಟದ ಕ್ರೀಡಾಕೂಟದ ಉದ್ಘಾಟನೆ

ವೇಣೂರು: ಬೆಳ್ತಂಗಡಿ ಸಂವಿಧಾನ ಸಂರಕ್ಷಣಾ ಸಮಿತಿ ಆಶ್ರಯದಲ್ಲಿ 75ನೇ ಭಾರತೀಯ ಸಂವಿಧಾನ ಜಾರಿ ದಿನಾಚರಣೆ ಅಂಗವಾಗಿ ಆದಿದ್ರಾವಿಡ ಸಮಾಜ ಬಾಂಧವರ ಅಂತರ್‌ಜಿಲ್ಲಾ ಮಟ್ಟದ ಕ್ರೀಡಾಕೂಟ ಸಂವಿಧಾನ ಟ್ರೋಫಿ-2024 ಮತ್ತು ಮುಕ್ತ ನೃತ್ಯಸ್ಪರ್ಧೆಯು ಮಾ.3ರಂದು ಕುಕ್ಕೇಡಿಯ ಇಂದಿರಾಗಾಂಧಿ ಕ್ರೀಡಾಂಗಣದಲ್ಲಿ ಜರಗಿತು.

ದ.ಕ. ಜಿಲ್ಲಾ ಆದಿದ್ರಾವಿಡ ಸಮಾಜಸೇವಾ ಸಂಘದ ಅಧ್ಯಕ್ಷ ಶ್ರೀನಿವಾಸ ಅರ್ಬಿಗುಡ್ಡೆ ಉದ್ಘಾಟನೆ ನೆರವೇರಿಸಿ, ಸಮುದಾಯದ ಬಲವರ್ಧನೆಗೆ ಸಂಘಟನೆ ಅಗತ್ಯವಾಗಿದೆ. ಇಂತಹ ಕ್ರೀಡಾಕೂಟಗಳ ಆಯೋಜನೆಯಿಂದ ಸಂಘಟನಾತ್ಮಕವಾಗಿ ಬಲಿಷ್ಠರಾಗುವುದಲ್ಲದೆ ಕ್ರೀಡಾಳುಗಳಿಗೆ ಮತ್ತಷ್ಟು ಬೆಳೆಯಲು ಅವಕಾಶ ಮಾಡಿದಂತಾಗುತ್ತದೆ. ಪ್ರತಿಯೊಂದು ಕ್ಷೇತ್ರದಲ್ಲಿ ನಮ್ಮ ಸಮುದಾಯ ಮುಂಚೂಣಿಗೆ ಬರುವಂತಾಗಬೇಕು ಎಂದರು.

ಸಂವಿಧಾನ ಸಂರಕ್ಷಣಾ ಸಮಿತಿ ಗೌರವ ಅಧ್ಯಕ್ಷರಾದ ನಾಗಪ್ಪ ವೇಣೂರು ಅಧ್ಯಕ್ಷತೆ ವಹಿಸಿದ್ದರು.

ಕ.ದ.ಸಂ. ಸಮಿತಿ ರಾಜ್ಯ ಸಂಘಟನ ಸಂಚಾಲಕ ಚಂದು ಎಲ್., ಸತೀಶ್ ಕೆ. ಕಾಶಿಪಟ್ಣ, ಪ್ರವೀಣ್ ಪಿಂಟೋ, ಮೋನಪ್ಪ ಪೊಲೀಸ್ ಮಂಗಳೂರು, ವೆಂಕಪ್ಪ ಹೆಡ್ ಕಾನ್ಸ್‌ಸ್ಟೇಬಲ್ ಪುತ್ತೂರು, ಸುಜಾತ ಮಿಯಲಾಜೆ, ಜಯಾನಂದ ಕೊಯ್ಯೂರು, ಸತೀಶ್ ಹೆಗ್ಡೆ, ನಿತೀಶ್ ಎಚ್., ರಮೇಶ್ ಪೂಜಾರಿ ಪಡ್ಡಾಯಿಮಜಲು, ಹರೀಶ್ ಕುಮಾರ್ ಪೊಕ್ಕಿ, ವಿ. ಪ್ರಭಾಕರ ಹೆಗ್ಡೆ ಹಟ್ಟಾಜೆ, ದಿನೇಶ್ ಕೊಕ್ಕಡ, ಶೇಖರ್ ಮಚ್ಚಿನ, ಬಾಲಕೃಷ್ಣ ಭಟ್ ವೇಣೂರು, ಚಂದ್ರಾವತಿ ಕುಕ್ಕೇಡಿ, ವಿಜಯ ಮುಂಡಾಜೆ, ಮುತ್ತಪ್ಪ ಪಿಲಿಯೂರು, ಕರಿಯ, ಕೀರ್ತಿ ಶಿರ್ತಾಡಿ, ಸಮಿತಿಯ ಅಧ್ಯಕ್ಷರಾದ ಸುಂದರ ಎನ್. ಕಾಶಿಪಟ್ಣ, ಪ್ರದಾನ ಕಾರ್ಯದರ್ಶಿ ಗಣೇಶ್ ಕುಕ್ಕೇಡಿ ಮತ್ತಿತರರು ಉಪಸ್ಥಿತರಿದ್ದರು.

ಕ.ದ.ಸಂ.ಸ. ಅಂಬೇಡ್ಕರ್ ವಾದ ಕುಕ್ಕೇಡಿ-ನಿಟ್ಟಡೆ ಸದಸ್ಯರು ಸಹಕರಿಸಿದರು.

ಸಮಿತಿ ಗೌರವ ಸಲಹೆಗಾರ ಶೇಖರ ಕುಕ್ಕೇಡಿ ಸ್ವಾಗತಿಸಿ, ವಂದಿಸಿದರು. ಸುಕೇಶ್ ಮಾಲಾಡಿ ನಿರೂಪಿಸಿದರು.

Exit mobile version