Site icon Suddi Belthangady

ವೇಣೂರು ಶಿವಾಜಿ ನಗರದಲ್ಲಿ ಸಿರ್ಲಾ ಸ್ಮರಣಾರ್ಥ ಅಂತರ್ ಜಿಲ್ಲಾ ಹೊನಲು ಬೆಳಕಿನ ಕಬಡ್ಡಿ ಪಂದ್ಯಾಟ

ವೇಣೂರು: ಕಬಡ್ಡಿ ಅಕಾಡಮಿ,ಸಿರ್ಲ ಬ್ರದರ್ಸ್ ವೇಣೂರು, ಹಾಗು ಅಮೇಚೂರು ಕಬಡ್ಡಿ ಅಸೋಸಿಯೇಷನ್ ಬೆಳ್ತಂಗಡಿ ಇವರ ಸಹಭಾಗಿತ್ವದಲ್ಲಿ ದಿ.ಸಿರ್ಲಾ ಸ್ಮರಣಾರ್ಥ ಅಂತರ್ ಜಿಲ್ಲಾ ಮಟ್ಟದ 52 ಕೆ.ಜಿ ವಿಭಾಗದ ಹೊನಲು ಬೆಳಕಿನ ಪುರುಷರ 2ನೇ ವರ್ಷದ ಕಬಡ್ಡಿ ಪಂದ್ಯಾಟ ಸಿರ್ಲ ಟ್ರೋಫಿ-2024ನ್ನು ವೇಣೂರಿನ ಶಿವಾಜಿ ನಗರದಲ್ಲಿ ಮಾ.2ರಂದು ನಡೆಯಿತು.

ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ಧರಣೇಂದ್ರ ಕುಮಾರ್ ಹೊಸಂಗಡಿ ದೀಪ ಪ್ರಜ್ವಲಿಸಿ ಉದ್ಘಾಟಿಸಿದರು.

ವೇಣೂರಿನ ಪದ್ಮಾಂಬ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಜಿನರಾಜ್ ಜೈನ್ ಕಾರ್ಯಕ್ರಮದ ಅಧ್ಯಕ್ಷೆತೆ ವಹಿಸಿದ್ದರು.

ವೇಣೂರು ಗ್ರಾಮ ಪಂಚಾಯತ್ ಅಧ್ಯಕ್ಷ ನೇಮಯ್ಯ ಕುಲಾಲ್,ಅತ್ಯುತ್ತಮ ಶಿಕ್ಷಕ ರಾಷ್ಟ್ರ ಪ್ರಶಸ್ತಿ ವಿಜೇತ ವಿ.ಪ್ರಭಾಕರ್ ಹೆಗ್ಡೆ ಹೆಟ್ಟಾಜೆ ಗುತ್ತು, ಗ್ರಾ.ಪ ಮಾಜಿ ಅಧ್ಯಕ್ಷ ಸತೀಶ್ ಹೆಗ್ಡೆ, ತಾಲೂಕು ಆರಾಧನಾ ಸಮಿತಿಯ ಸದಸ್ಯ ಬಾಲಕೃಷ್ಣ ಭಟ್, ತಾಲೂಕು ಭೂ ನ್ಯಾಯ ಮಂಡಳಿ ಸದಸ್ಯ ಇಸ್ಮಾಯಿಲ್ ಕೆ ಪೆರಿಂಜೆ, ರಮೇಶ್ ಪೂಜಾರಿ ಪಡ್ಡಯಿಮಜಲ್ ,ಬಶೀರ್ ಕಟ್ಟೆ ವಿಕೆ ಟ್ರೇಡರ್ಸ್, ಅರವಿಂದ ಶೆಟ್ಟಿ ಖಂಡಿಗ, ದಯಾನಂದ ದೇವಾಡಿಗ ಅಲಂತಿಯಾರ್, ಜಕ್ರಿಯಾ ಪರಾರಿಬೈಲ್ ಮೂಡುಕೋಡಿ, ವೇಣೂರು ಕೃಷಿಪತ್ತಿನ ಸಹಕಾರಿ ಸಂಘದ ನಿವೃತ್ತ ಕಾರ್ಯನಿರ್ವಹಣಾಧಿಕಾರಿ ಎಚ್.ಮಹಮ್ಮದ್ ವೇಣೂರು, ಉದ್ಯಮಿ ದಿನೇಶ್ ಸಾವ್ಯ, ಪೊಂಕ್ರ ಮೇಸ್ತ್ರಿ, ಪಿಎಚ್ ಅಶ್ರಫ್ ಶಾಂತಿ ನಗರ, ರಾಜೇಶ್ ಕೈತೇರಿ, ಸೇಸಪ್ಪ ಉಪಸ್ಥಿತರಿದ್ದರು.

ಸಾದಾತ್, ಗಿರೀಶ್ ಕಾರ್ಯಕ್ರಮ ಸಂಯೋಜಿಸಿದರು.ಅಷ್ಪಾಕ್, ವಿಜೇತ್ ಮತ್ತು ಸುಕುಮಾರ್ ಸಹಕರಿಸಿದರು.

Exit mobile version