Site icon Suddi Belthangady

ಇಂದಬೆಟ್ಟು ನಿವಾಸಿ ಜೋಷನ್ ರಸ್ತೆ ಅಪಘಾತದಲ್ಲಿ ಸಾವು

ಬೆಳ್ತಂಗಡಿ: ಇಂದಬೆಟ್ಟು ಗ್ರಾಮದ ಮುಂಡ್ರಾಬೆಟ್ಟು ನಿವಾಸಿಯಾಗಿರುವ ಜೋಶನ್(20) ಇವರು ಕೆಲಸ ಮುಗಿಸಿ ಕಿಲ್ಲೂರಿನಿಂದ ಇಂದಬೆಟ್ಟು ಮನೆಗೆ ತೆರಳುತ್ತಿದ್ದ ವೇಳೆಯಲ್ಲಿ ರಾತ್ರಿ ಕುತ್ರಾಬೆಟ್ಟು ದೇವಸ್ಥಾನದ ಸಮೀಪ ಚಾಲಕನ ನಿಯಂತ್ರಣ ತಪ್ಪಿ ಬೈಕ್ ಮೋರಿಗೆ ರಭಸದಿಂದ ಡಿಕ್ಕಿ ಹೊಡೆದು ಸ್ಥಳದಲ್ಲಿಯೇ ಸಾವನಪ್ಪಿದ ಘಟನೆ ಮಾ.3ರಂದು ರಾತ್ರಿ ನಡೆದಿದೆ.

ಮೃತರು ತಂದೆ M.J ಜೋಸೆಫ್, ತಾಯಿ ಚೆಲ್ಲಿ ಇವರಿಗೆ ಓರ್ವ ಮಗನಾಗಿ ಮನೆಯ ಬೆಳಕಾಗಿದ್ದನು.

Exit mobile version