Site icon Suddi Belthangady

ಇಳಂತಿಲ ವಾಣಿಶ್ರೀ ಗೆಳೆಯರ ಬಳಗ ಸಂಘದ 30ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ‘ಇಳೋತ್ಸವ-2024’ರ ಪೂರ್ವಭಾವಿ ಸಭೆ

ಇಳಂತಿಲ: ಇಳಂತಿಲ ವಾಣಿಶ್ರೀ ಗೆಳೆಯರ ಬಳಗ ಸಂಘದ 30ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಎ.06ರಂದು ನಡೆಯಲಿರುವ ಇಳಂತಿಲದ ಸಾಂಸ್ಕೃತಿಕ ಹಬ್ಬ”ಇಳೋತ್ಸವ 2024″ರ ಪೂರ್ವಭಾವಿ ಸಭೆಯು ಮಾ.01ರಂದು ವಾಣಿಶ್ರೀ ಭಜನಾ ಮಂದಿರ ವಾಣಿ ನಗರದಲ್ಲಿ ನಡೆಯಿತು.

ಕಾರ್ಯಕ್ರಮದ ಗೌರವ ಅಧ್ಯಕ್ಷರಾಗಿ ಬೆಂಗಳೂರಿನ ಯುವ ಉದ್ಯಮಿ ಕಿರಣ್ ಚಂದ್ರ ಇವರು ಆಯ್ಕೆಯಾದರು.ಕಾರ್ಯಕ್ರಮದ ಅಧ್ಯಕ್ಷರಾಗಿ ಇಳಂತಿಲದ ಅಶ್ವಿನಿ ಬ್ರಿಕ್ಸ್ ನ ಮಾಲಕ ಆಕಾಶ್ ರವರು ಆಯ್ಕೆಯಾದರು.

ಕಾರ್ಯಾಧ್ಯಕ್ಷರಾಗಿ ವಾಣಿಶ್ರೀ ಗೆಳೆಯರ ಬಳಗದ ಅಧ್ಯಕ್ಷರಾಗಿ ಪ್ರೀತಮ್ ವಾಣೀನಗರ ಉಪಾಧ್ಯಕ್ಷರಾಗಿ ಸಚಿನ್ ಪೆಲಪ್ಪಾರು ಶ್ರೀಮಾತಾ, ಮತ್ತು ಅಮೃತ್ ಕಲ್ಲಳಿಕೆ. ಕಾರ್ಯದರ್ಶಿಯಾಗಿ ಕವೀಶ್ ಶೆಟ್ಟಿ, ಜೊತೆ ಕಾರ್ಯದರ್ಶಿಯಾಗಿ ಮೋಕ್ಷಿತ್ ಮುರ, ಗಣೇಶ್ ಕಲ್ಚಾರ್. ಕೋಶಾಧಿಕಾರಿಗಳಾಗಿ ರಮೇಶ್ ಶ್ರೀ ದುರ್ಗಾ ಮತ್ತು ಶ್ರೀ ಉಮೇಶ್ ಗೌಡ ಕುಂಟಾಲ್ಕಟ್ಟೆ ಆಯ್ಕೆಯಾದರು.

ಗೌರವ ಸಲಹೆಗಾರರಾಗಿ ಜನಾರ್ದನ ಗೌಡ ಅಣ್ಣಾಜೆ, ರವಿ ಇಳಂತಿಲ, ಲಕ್ಷ್ಮೀಶ ಪಾಡೆಂಕಿ, ಕೆ.ವಿ ಪ್ರಸಾದ್ ಭಟ್, ಚಂದ್ರಿಕಾ ಭಟ್, ತಿಮ್ಮಪ್ಪ ಗೌಡ ಕುಮೆರ್ಜಾಲ್, ವೆಂಕಟರಮಣ ಭಟ್ ಪೆಲಪ್ಪಾರು, ಗಣೇಶ್ ಭಟ್ ಮೂಡಾಜೆ, ಜಯಪ್ರಸಾದ್ ಕಡಮ್ಮಾಜೆ, ವಸಂತ ಶೆಟ್ಟಿ ಸಹಸ್ರ, ವಸಂತ ಜಿ ಸಾಲಿಯಾನ್, ಹರೀಶ್ ಗೌಡ ವಾಣೀನಗರ, ಸುಂದರ ಶೆಟ್ಟಿ ಎಂಜಿರಪಳಿಕೆ, ಪದ್ಮನಾಭ ಕುಂಬಾರ ಎಣ್ಮಾಡಿ, ಲಕ್ಮಣ ಮಿತ್ತಿಲ, ಪ್ರಚಾರ ಸಮಿತಿಯ ಸಂಚಾಲಕರಾಗಿ ಗಿರೀಶ್ ಅರ್ಬಿ, ಸ್ವಾಗತ ಸಮಿತಿಯ ಸಂಚಾಲಕರಾಗಿ ಜಗದೀಶ್ ಕಟ್ಟೆಚ್ಚಾರ್ ಮತ್ತು ಗಿರೀಶ್ ಇಳಂತಿಲ ಮಾರಾಟ ಮಳಿಗೆಯ ನಿರ್ವಹಣೆ ಉಮೇಶ್ ಪೂಜಾರಿ ಅಣ್ಣಾಜೆ ಮತ್ತು ಯತೀಶ್ ನೆಕ್ಕಾರೆ, ಅಲಂಕಾರ ಸಮಿತಿಯ ಸಂಚಾಲಕರಾಗಿ ಲಕ್ಷ್ಮೀಶ ಪಾಡೆಂಕಿ ಇವರನ್ನು ಆಯ್ಕೆ ಮಾಡಲಾಯಿತು.

Exit mobile version