Site icon Suddi Belthangady

ಉಜಿರೆ ಪೇಟೆಯಲ್ಲಿ ನಿಲ್ಲಿಸಿದ್ದ ಬೈಕ್ ಕಳ್ಳತನ

ಬೆಳ್ತಂಗಡಿ: ಉಜಿರೆ ಪೇಟೆಯಲ್ಲಿ ನಿಲ್ಲಿಸಿದ್ದ ಬೈಕ್ ಅನ್ನು ಕಳ್ಳತನ ಮಾಡಿದ ಘಟನೆ ಸಂಭವಿಸಿದ್ದು ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ‌ ದಾಖಲಿಸಲಾಗಿದೆ.

ಉಜಿರೆ ಗ್ರಾಮದ ನಿವಾಸಿ ರಾಜು ಎಂಬವರು ತನ್ನ ಬೈಕ್ ( ಕೆ.ಎ 19 ಹೆಚ್ ಸಿ 0606ನಂಬರ್ ನ ಹೋಂಡಾ ಯೂನಿಕಾರ್ನ್ ) ಅನ್ನು ಉಜಿರೆ ಪೇಟೆಯ ದಿಶಾ ಬೇಕರಿಯ ಮುಂಭಾಗದಲ್ಲಿ ಫೆ.29ರಂದು ರಾತ್ರಿ ವೇಳೆ ನಿಲ್ಲಿಸಿ ಹೋಗಿದ್ದು ಒಂದು ಗಂಟೆಯ ಬಳಿಕ ಮರಳಿ ಬಂದು ನೋಡಿದಾಗ ಬೈಕ್ ನಾಪತ್ತೆಯಾಗಿತ್ತು.

ಕಳವಾದ ಬೈಕಿನ ಮೌಲ್ಯ ಸುಮಾರು 75,000 ಎಂದು ಅಂದಾಜಿಸಲಾಗಿದೆ.ಈ ಬಗ್ಗೆ ಅವರು ಬೆಳ್ತಂಗಡಿ ಪೊಲೀಸರಿಗೆ ದೂರು ನೀಡಿದ್ದು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Exit mobile version