Site icon Suddi Belthangady

ನಾಮಫಲಕದ ಅಡಿಯಲ್ಲೇ ಕಸದ ರಾಶಿ: ಬಾರ್ಯ ಗ್ರಾಮ ಪಂಚಾಯತ್ ನ ಫಲಕಕ್ಕೆ ಕ್ಯಾರೇ ಎನ್ನದ ಸಾರ್ವಜನಿಕರು

ಬಾರ್ಯ: ಬಾರ್ಯ ಗ್ರಾ.ಪಂ.ವ್ಯಾಪ್ತಿಯ ಮುರುಗೋಳಿ – ಉಪ್ಪಿನಂಗಡಿ ರಸ್ತೆಯ ನೀಲಗಿರಿ ಸಮೀಪ ಕಸದ ರಾಶಿ ರಾರಾಜಿಸುತ್ತಿದೆ.ಸ್ವಚ್ಚತೆಗೆ ಉತ್ತೇಜನ ನೀಡುವ ಗ್ರಾ.ಪಂ.ಗಳು ಈ ರೀತಿ ಕಸದ ರಾಶಿ ಇರುವುದು ಬಾರ್ಯ ಗ್ರಾ‌ಪಂ.ನ ಗಮನಕ್ಕೆ ಬಾರದೇ ಇರುವುದು ವಿಪರ್ಯಾಸ ಸಂಗತಿ.

ನಾಮ ಫಲಕ ಅಡಿಯಲ್ಲಿ ಕಸದ ರಾಶಿ: ಕಸದ ರಾಶಿ ಇರುವ ಸ್ಥಳದಲ್ಲಿ ಪ್ಲಾಸ್ಟಿಕ್ ಹಾಗೂ ಇತರೆ ತ್ಯಾಜ್ಯಗಳನ್ನು ಎಸೆಯಬಾರದು.ತ್ಯಾಜ್ಯಗಳು ಎಸೆಯುವುದು ಕಂಡುಬಂದಲ್ಲಿ ದಂಢ ವಿಧಿಸಲಾಗುವುದು ಎಂಬ ನಾಮಫಲಕವನ್ನು ಗ್ರಾ.ಪಂ. ಅವಳಡಿಸಿ ಇದರ ಜೊತೆಗೆ ಸಿಸಿಟಿವಿ ಅಳವಡಿಸಲಾಗಿದೆ ಎಂಬುದನ್ನು ನಾಮಫಲಕವನ್ನು ಹಾಕಿದ್ದರೂ ನಾಮಫಲಕದ ಸುತ್ತಮುತ್ತ ಕಸ ಹರಡಿದೆ.

Exit mobile version