Site icon Suddi Belthangady

ಓಡಿಲ್ನಾಳ: ಮೈರಲ್ಕೆ ಪಶುಪತಿ ಕೃಪಾ ಯಕ್ಷಗಾನ ಬಯಲಾಟ ಸಮಿತಿ ವತಿಯಿಂದ ಮಾಜಿ ಶಾಸಕ ಕೆ.ವಸಂತ ಬಂಗೇರರ ಪ್ರಯೋಜಕತ್ವದಲ್ಲಿ ಕುಮಾರ ವಿಜಯ ಯಕ್ಷಗಾನ- ಕಿರಾತ ಮೂರ್ತಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ದಾರ ಕಾರ್ಯದಲ್ಲಿ ಭಾಗಿಯಾದ ಕರಸೇವಕರಿಗೆ ಗೌರವಾರ್ಪಣೆ

ಓಡಿಲ್ನಾಳ: ಓಡಿಲ್ನಾಳ ಮೈರಲ್ಕೆ ಪಶುಪತಿ ಕೃಪಾ ಯಕ್ಷಗಾನ ಬಯಲಾಟ ಸಮಿತಿ ವತಿಯಿಂದ ಮಾಜಿ ಶಾಸಕ ಕೆ.ವಸಂತ ಬಂಗೇರರ ಪ್ರಯೋಜಕತ್ವದಲ್ಲಿ ಫೆ.29ರಂದು ಆದಿ ಧೂಮಾವತಿ ಶ್ರೀ ದೇಯಿಬೈದೆತಿ ಕೃಪಾ ಪೋಷಿತ ಯಕ್ಷಗಾನ ಮಂಡಳಿ ಮೂಲಸ್ಥಾನ ಗೆಜ್ಜೆಗಿರಿ ಇವರಿಂದ ಕುಮಾರ ವಿಜಯ (ಶೂರ ಪದ್ಮಾಸುರ ಕಾಳಗ) ಯಕ್ಷಗಾನ ಹಾಗೂ ಕಿರಾತ ಮೂರ್ತಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ದಾರದ ಸಮಯದಲ್ಲಿ ದಿನ ನಿತ್ಯ ಕರಸೇವಕರಾಗಿ ಶ್ರಮದಾನದಲ್ಲಿ ಭಾಗಿಯಾದವರನ್ನು ದೇವಸ್ಥಾನದ ಜೀರ್ಣೋದ್ದಾರ ಸಮಿತಿ ಮತ್ತು ಓಡಿಲ್ನಾಳ ಧರ್ಮೋಸ್ಥಾನ ಟ್ರಸ್ಟ್ ಮೈರಲ್ಕೆ ಇವರ ವತಿಯಿಂದ ಗೌರವಾರ್ಪಣೆ ಕಾರ್ಯಕ್ರಮ ದೇವಸ್ಥಾನದ ವಠಾರದಲ್ಲಿ ಜರಗಿತು.

ರಾತ್ರಿ ಕಿರಾತ ಮೂರ್ತಿ ಶ್ರೀ ಮಹಾಲಿಂಗೇಶ್ವರ ದೇವರೀಗೆ ವಿಶೇಷ ಪೂಜೆ ನೆರವೇರಿಸಿ ತದನಂತರ ಚೌಕಿ ಪೂಜೆ ಜರಗಿತು.ಈ ಸಂದರ್ಭದಲ್ಲಿ ಡಾ.ರಾಜರಾಮ್ ಉಪ್ಪಿನಂಗಡಿ, ಮನೋಹರ ಕುಮಾರ್ ವಕೀಲರು ಬೆಳ್ತಂಗಡಿ, ಬೆಳ್ತಂಗಡಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷ ಜಯ ವಿಕ್ರಮ್, ಧರಣೇಂದ್ರ ಕುಮಾರ್, ಬೆಳ್ತಂಗಡಿ ಬೆಸ್ಟ್ ಪೌಂಡೆಶನ್ ಅಧ್ಯಕ್ಷರು ರಕ್ಷಿತ್ ಶಿವರಾಮ್, ಕೋಶಾಧಿಕಾರಿ ಶ್ರೀ ಕುದ್ರೋಳಿ ಗೋಕರ್ಣನಾಥ ಕ್ಷೇತ್ರ ಮಂಗಳೂರು ಪದ್ಮರಾಜ್ ಆರ್, ಗೋಪಿನಾಥ್ ನಾಯಕ್ ಗುರುವಾಯನಕೆರೆ ಆಗಮಿಸಿದ್ದರು.

ಎಸ್ ಗಂಗಾಧರ್ ಭಟ್ ಕೆವುಡೇಲು, ಚಂದ್ರಹಾಸ್ ಕೇದೆ, ವ್ರಷಭ ಆರಿಗ ಆಡಳಿತ ಮೊಕ್ತೇಸರರು ಕಿರಾತ ಮೂರ್ತಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಮೈರಲ್ಕೆ, ಯಕ್ಷಗಾನ ಬಯಲಾಟ ಸಮಿತಿ ಸ್ಥಾಪಕಾಧ್ಯಕ್ಷ ದಿನೇಶ್ ಮೂಲ್ಯ ಕೊಂಡೆಮಾರ್, ಅಧ್ಯಕ್ಷ ಸೋಮನಾಥ, ಬಿ.ಟ್ರಸ್ಟಿಗಳಾದ ಸತೀಶ್ ಪೊಕ್ಕಿ, ವೆಂಕಪ್ಪ ಗೌಡ, ಉಪಾಧ್ಯಕ್ಷರಾದ ಕೇಶವ ನಾಯ್ಕ್ ಬೊಳ್ಳಂತ್ತಾರು, ಪ್ರಭಾಕರ ಶಾಂತಿ ಕೋಡಿ, ಹರಿಪ್ರಸಾದ್ ಇರ್ವತ್ರಾಯ ತಂಗೋಯಿ, ಅನಂತ್ ಎಸ್ ಇರ್ವತ್ರಾಯ ತಂಗೋಯಿ, ಅರುಣ ಶೆಟ್ಟಿ ಮಠ, ಮೋಹನ ಶೆಟ್ಟಿ ಕೆರೆಕಜೆ, ಶೇಖರ ಶಾಂತಿಕೋಡಿ, ಸುರೇಶ್ ಶೆಟ್ಟಿ ಪರಾರಿ, ಪ್ರಧಾನ ಕಾರ್ಯದರ್ಶಿ ಅನೂಪ್ ಬಂಗೇರ ಮದ್ದಡ್ಕ, ಕಾರ್ಯದರ್ಶಿಗಳಾದ ವಿಜಯ ಕೊಂಡೆಮಾರ್, ದೇಜಮ್ಮ ಕೆರೆಕೊಡಿ, ಮಾಲತಿ ನಾನಾಡಿ, ಸುಧಾ ಶೆಟ್ಟಿ ಮೈರಲ್ಕೆ, ಗುಲಾಬಿ ಭದ್ರಕಜೆ, ಶಾಲಿನಿ ಮಠ, ಲೀಲಾವತಿ ಮಡಂತಿಲ, ಶಶಿಕಲಾ ಕೆರೆಕಜೆ, ಕೋಶಾಧಿಕಾರಿ ಸತೀಶ್‌ ಪೊಕ್ಕಿ, ಸದಸ್ಯರಾದ ರಾಘವೇಂದ್ರ ಗೌಡ ಕರ್ನಂತ್ತೋಡಿ, ಶಿವಪ್ಪ ನಾಯ್ಕ ರೇಷ್ಮೆ, ಹರೀಶ್ ನಾಯ್ಕ್ ರೇಷ್ಮೆ, ನಾಗೇಶ್ ಪೂಜಾರಿ ಅದೇಲು, ಸತೀಶ್ ಬನ, ರಾಜೇಶ್ ಶೆಟ್ಟಿ ಅಶ್ವಥ ನಗರ ಮತ್ತಿತರರು ಉಪಸ್ಥಿತರಿದ್ದರು.

Exit mobile version