ಬೆಳ್ತಂಗಡಿ:ಕರ್ನಾಟಕ ರಾಜ್ಯ ಗ್ರಾಮ ಪಂಚಾಯತ್ ನೌಕರರ ಶ್ರೇಯೋಭಿವೃದ್ಧಿ ಸಂಘ (ಆರ್.ಡಿ.ಪಿ.ಆರ್) ಇಲಾಖೆಯಿಂದ ಹೊರಡಿಸುತ್ತಿರುವ ಸುತ್ತೋಲೆಗಳಿಂದ ಪಂಚಾಯತ್ ನೌಕರರಿಗೆ ಗ್ರಾಮ ಪಂಚಾಯತ್ ನೌಕರರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಸಿ ಮತ್ತು ಡಿ ದರ್ಜೆ ವೇತನ ಶ್ರೇಣಿ ಕುರಿತು, ಜಿಲ್ಲಾ ಪಂಚಾಯತ್ ಅನುಮೋದನೆ ಸಮಸ್ಯೆ, ಮುಂಬಡ್ತಿ ವಿಚಾರ, ಹಲವಾರು ಸಮಸ್ಯೆಗಳ ಹಕ್ಕೋತ್ತಾಯ ಕುರಿತು ಪಂಚಾಯತ್ ಕಚೇರಿಯಲ್ಲಿಯೇ ಮಾ.1ರಿಂದ ಕೈ ತೋಳಿಗೆ ಕಪ್ಪು ಪಟ್ಟಿ ಧರಿಸಿ ಶೋಷಣೆ ಮುಕ್ತ ಬದುಕಿಗಾಗಿ ಪ್ರತಿಭಟನೆ, ಸರಿಯಾಗಿ ಸ್ಪಂದಿಸದೆ ಇದ್ದಲ್ಲಿ ಮುಂದಿನ ದಿನಗಳಲ್ಲಿ ಬೃಹತ್ ಪ್ರತಿಭಟನೆ.
ಪ್ರಾಥಮಿಕ ಹಂತದಲ್ಲಿ ಕೈ ತೋಳಿಗೆ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.ಇದರಿಂದ ಸರಕಾರಕ್ಕೆ ಮುಜುಗರ ತರುವ ಪರಿಸ್ಥಿತಿಯಾಗಲಿದೆ.
ಧರ್ಮಸ್ಥಳ ಗ್ರಾಮ ಪಂಚಾಯತ್ ಗ್ರಾಮ ಸಭೆಯಲ್ಲಿ ಸಂಘದ ರಾಜ್ಯಾಧ್ಯಕ್ಷ ಡಾ.ದೇವ ಪ್ರಸಾದ್ ಬೊಲ್ಮ ಸೇರಿ ಸಿಬ್ಬಂದಿಗಳು ಕೈ ತೋಳಿಗೆ ಕಪ್ಪುಪಟ್ಟಿ ಧರಿಸಿ ಕೆಲಸ ಮಾಡಿದರು.
ಅದರಂತೆ ಎಲ್ಲಾ ಪಂಚಾಯತ್ ಗಳಲ್ಲಿ ಈ ರೀತಿಯಲ್ಲಿ ಪ್ರತಿಭಟನೆ ನಡೆಸಿದ್ದಾರೆ.