Site icon Suddi Belthangady

ತಣ್ಣೀರುಪಂತ: ಕುದ್ಕೋಳಿ ಕಟ್ಟೆ ಶ್ರೀ ಗ್ರಾಮದೈವ ಶ್ರೀ ರಾಜನ್‌ದೈವ ಕೊಡಮಣಿತ್ತಾಯ ಮತ್ತು ಶ್ರೀ ಬ್ರಹ್ಮಬೈದರ್ಕಳ ಗರಡಿಯ ವರ್ಷಾವಧಿ ಜಾತ್ರೋತ್ಸವ


ತಣ್ಣೀರುಪಂತ: ಕುದ್ಕೋಳಿ ಕಟ್ಟೆ ಶ್ರೀ ಗ್ರಾಮದೈವ ಶ್ರೀ ರಾಜನ್‌ ದೈವ ಕೊಡಮಣಿತ್ತಾಯ ಮತ್ತು ಶ್ರೀ ಬ್ರಹ್ಮಬೈದರ್ಕಳ ಗರಡಿಯ ವರ್ಷಾವಧಿ ಜಾತ್ರೋತ್ಸವವು ಇಂದಿನಿಂದ(ಮಾ.1ರಿಂದ) ಮಾ.3ರವರೆಗೆ ಜರುಗಲಿದೆ.

ಮಾ.1 ರಂದು ಬೆಳಿಗ್ಗೆ ಹಸಿರುವಾಣಿ ಹೊರೆಕಾಣಿಕೆ ಸಮರ್ಪಣೆ, ಸಂಜೆ ನೂತನ ಭಂಡಾರದ ಚಾವಡಿಯ ಪುಣ್ಯಾಹ ವಾಚನ, ಬಿಂಬಶುದ್ಧಿ, ವಾಸ್ತುಹೋಮ, ರಾಕ್ಷೆಘ್ನ ಹೋಮ, ವಾಸ್ತುಬಲಿ, ಅಧಿವಾಸ, ಸ್ಥಳೀಯ ಶಾಲಾ ವಿದ್ಯಾರ್ಥಿಗಳಿಂದ ಹಾಗೂ ಸಾರ್ವಜನಿಕರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು, ಅನ್ನಸಂತರ್ಪಣೆ ನಡೆಯಲಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಗ್ರಾಮ ದೈವ ಕೊಡಮಣಿತ್ತಾಯ ಮತ್ತು ಶ್ರೀ ಬ್ರಹ್ಮಬೈದರ್ಕಳ ಗರಡಿ ಟ್ರಸ್ಟ್ ಅಧ್ಯಕ್ಷ ಸುನೀಲ್ ಕುಮಾರ್ ಅಗರಿ ವಹಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಶಾಸಕ ಹರೀಶ್ ಪೂಂಜ, ವಿಧಾನ ಪರಿಷತ್ ಶಾಸಕ ಕೆ. ಹರಿಶ್ ಕುಮಾರ್, ಬೆಸ್ಟ್ ಫೌಂಡೇಶನ್ ಅಧ್ಯಕ್ಷ ಹಾಗೂ ಪ್ರಧಾನ ಕಾರ್ಯದರ್ಶಿ ಕೆಪಿಸಿಸಿ ರಕ್ಷಿತ್ ಶಿವರಾಮ್ ಉಪಸ್ಥಿತರಿರುವರು.

ರಾತ್ರಿ ಮಡಪ್ಪಾಡಿ ಶ್ರೀ ಅಚ್ಯುತ ಆಚಾರ್ಯ ರಚಿಸಿ, ನಿರ್ದೇಶಿಸಿ, ನಟಿಸಿದ ಮತ್ತು ಸ್ಥಳೀಯ ಕಲಾವಿದರು ಅಭಿನಯಿಸಿದ ೞದ್ರೋಹ ಮಲ್ಲಿ ದೋಸ್ತಿ ತುಳು ಹಾಸ್ಯಮಯ ಸಾಮಾಜಿಕ ನಾಟಕ ಪ್ರದರ್ಶನಗೊಳ್ಳಲಿದೆ.

ಮಾ.2ರಂದು ಬೆಳಿಗ್ಗೆ ಗಣಹೋಮ, ಮೃತ್ಯುಂಜಯ ಹೋಮ, ಸಾನಿಧ್ಯ ಕಲಶ, ವೃಷಭ ಲಗ್ನದಲ್ಲಿ ಬಿಂಬಪ್ರತಿಷ್ಠೆ, ಭಂಡಾರ ಒಪ್ಪಿಸುವುದು, ಮಧ್ಯಾಹ್ನ ಪರ್ವಸೇವೆ, ಅನ್ನಸಂತರ್ಪಣೆ, ಸಂಜೆ ಭಂಡಾರ ಇಳಿದು ತೋರಣ ಮುಹೂರ್ತ, ಗೋಧೋಳಿ ಲಗ್ನದಲ್ಲಿ ಧ್ವಜಾರೋಹಣ, ರಾತ್ರಿ ಶ್ರೀ ದೈವಂಕುಲ ನೇಮೋತ್ಸವ, ಶ್ರೀ ರಾಜಂದೈವ ಕೊಡಮಣಿತ್ತಾಯ ದೈವದ ನೇಮೋತ್ಸವ ನಡೆಯಲಿದೆ.

ಮಾ.3 ರಂದು ರಾತ್ರಿ ಶ್ರೀ ಬ್ರಹ್ಮಬೈದರ್ಕಳ ಹಾಗೂ ಮಾಣಿಬಾಲೆ ನೇಮೋತ್ಸವ ಜರುಗಲಿದೆ.

Exit mobile version