ಬೆಳ್ತಂಗಡಿ: ಸಿ.ಪಿ.ಸಿ.ಆರ್.ಐ ಕಾಸರಗೋಡಿನಲ್ಲಿ ಮಾ.13ರಿಂದ 15ರವರೆಗೆ ಉಪಯುಕ್ತವಾದ ಶೈಕ್ಷಣಿಕ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಗಿದೆ.
ವಿಷಯ(ಕೊಕ್ಕೋ ಬೆಳೆಯ ಕಿರು ವ್ಯಾಪಾರ ಉದ್ಯಮ, ಕಾನೂನು ನೀತಿ ಅನುಕರಣೆ, ಸಾಂಸ್ಥಿಕ ಬೆಂಬಲ, ಕೊಕ್ಕೋ ಗಿಡದ ಬಗ್ಗೆ ಮಾಹಿತಿ, ಕೊಕ್ಕೋ ಮೌಲ್ಯವರ್ಧನೆ ಮತ್ತು ಮಾರುಕಟ್ಟೆ) ಆಸಕ್ತ ಕೊಕ್ಕೋ ಬೆಳೆಗಾರರು, ಸ್ವಸಹಾಯ ಸಂಘದ ಸದಸ್ಯರು ಈ ಮೂರು ದಿನ ನಡೆಯುವ ಕಾರ್ಯಗಾರದಲ್ಲಿ ಭಾಗವಹಿಸಲು ಈ ಕೆಳಗಿರುವ ಲಿಂಕ್ ನಲ್ಲಿ ಮಾ.1ರ ಒಳಗಾಗಿ ನೋಂದಾಯಿಸಿಕೊಳ್ಳಬಹುದಾಗಿದೆ.
ವಿಶೇಷವಾಗಿ ಕೊಕ್ಕೋದಿಂದ ಚಾಕಲೇಟ್ ತಯಾರಿಸುವ ಕಿರು ಉದ್ಯಮ ಪ್ರಾರಂಭಿಸುವವರಿಗೆ ಉತ್ತಮ ಅವಕಾಶವಾಗಿರುತ್ತದೆ.
ತರಬೇತಿಗೆ ಯಾವುದೇ ಶುಲ್ಕ ಇರುವುದಿಲ್ಲ.ಸಂಪೂರ್ಣ ಉಚಿತವಾಗಿರುತ್ತದೆ.
ತರಬೇತಿ ಪಡೆದ ಬಗ್ಗೆ ಪ್ರಮಾಣ ಪತ್ರ ನೀಡಲಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ.