Site icon Suddi Belthangady

ಕುವೆಟ್ಟು: ಶ್ರೀ ಕ್ಷೇತ್ರ ಓಡೀಲು ಮಹಾಲಿಂಗೇಶ್ವರ ದೇವಸ್ಥಾನದ ಮಹಾದ್ವಾರ ನಿರ್ಮಾಣದ ಶಂಕುಸ್ಥಾಪನೆ

ಕುವೆಟ್ಟು: ಶ್ರೀ ಕ್ಷೇತ್ರ ಓಡೀಲು ಮಹಾಲಿಂಗೇಶ್ವರ ದೇವಸ್ಥಾನದ ಸಂಪರ್ಕ ರಸ್ಥೆಯ ಮದ್ದಡ್ಕ ಕಿನ್ನಿಗೋಳಿಯಲ್ಲಿ ಕಾಶಿ ಶೆಟ್ಟಿ ಮತ್ತು ಮನೆಯವರು ನವಶಕ್ತಿ ಗುರುವಾಯನಕೆರೆ ಇವರ ಕೊಡುಗೆಯಿಂದ ನಿರ್ಮಾಣವಾಗುವ ದೇವಸ್ಥಾನದ ಮಹಾದ್ವಾರ ನಿರ್ಮಾಣದ ಶಂಕುಸ್ಥಾಪನೆ ಕಾರ್ಯಕ್ರಮ ಫೆ.29ರಂದು ಜರಗಿತು.

ದೇವಸ್ಥಾನದ ಪ್ರಧಾನ ಅರ್ಚಕರು ರಘರಾಮ ಭಟ್ ಮಠ ವೈಧಿಕ ವಿಧಿ ವಿಧಾನಗಳನ್ನು ನೆರವೇರಿಸಿದರು.

ಈ ಸಂದರ್ಭದಲ್ಲಿ ಕಾಶಿ ಶೆಟ್ಟಿ, ರಾಜೇಶ್ ಶೆಟ್ಟಿ ನವಶಕ್ತಿ ಮತ್ತು ಮನೆಯವರು, ಮಾಜಿ ಶಾಸಕ ಪ್ರಭಾಕರ ಬಂಗೇರ, ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ಸಂತೋಷ್ ಕುಮಾರ್ ಜೈನ್ ಪಡಂಗಡಿ, ಪ್ರಧಾನ ಕಾರ್ಯದರ್ಶಿ ಚಿದಾನಂದ ಇಡ್ಯ, ಕೋಶಾಧಿಕಾರಿ ವಸಂತ ಗೌಡ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪ್ರಭಾಕರ ಶೆಟ್ಟಿ ಉಪ್ಪಡ್ಕ, ಗಂಗಾಧರ್ ಭಟ್ ಕೆವುಡೇಲು, ಮತ್ತಿತರರು ಉಪಸ್ಥಿತರಿದ್ದರು.

Exit mobile version