Site icon Suddi Belthangady

ನೆರಿಯ 2023-24ನೇ ಸಾಲಿನ ದ್ವಿತೀಯ ಸುತ್ತಿನ ಗ್ರಾಮ ಸಭೆ

ನೆರಿಯ: ನೆರಿಯ ಗ್ರಾಮ ಪಂಚಾಯತ್ 2023-24ನೇ ಸಾಲಿನ ದ್ವಿತೀಯ ಸುತ್ತಿನ ಗ್ರಾಮಸಭೆ ಗ್ರಾ.ಪಂ ಅಧ್ಯಕ್ಷೆ ವಸಂತಿ ಅಧ್ಯಕ್ಷತೆಯಲ್ಲಿ ಫೆ.29ರಂದು ನೆರಿಯ ಗ್ರಾಮ ಪಂಚಾಯತ್ ಸಭಾಭವನದಲ್ಲಿ ನಡೆಯಿತು.

ನೋಡೆಲ್ ಅಧಿಕಾರಿಯಾಗಿ ಮುಖ್ಯ ಪಶು ವೈದ್ಯಾಧಿಕಾರಿ, ಯತೀಶ್ ಮಾರ್ಗದರ್ಶನದಲ್ಲಿ ಸಭೆ ನಡೆಯಿತು. ಇಲಾಖೆಯ ಅಧಿಕಾರಿಗಳು ಇಲಾಖಾ ಮಾಹಿತಿ ನೀಡಿದರು.

ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಸಜಿತಾ, ಗ್ರಾ.ಪ್ರಂ ಸದ್ಯಸರುಗಳಾದ ಕುಶಲ, ಮಾಲತಿ, ಆಷ್ರಫ್ ರಮೇಶ್ ಕೆ.ಎಸ್, ಪಿ ಮಹಮ್ಮದ್, ದಿನೇಶ್, ಹೂವಯ್ಯ ಗೌಡ , ಮರಿಯಮ್ಮ, ಸವಿತಾ, ರೀನಾ, ವಿ.ಡಿ ಥೋಮಸ್, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಗ್ರಾಮಸ್ಥರು ಉಪಸ್ಥಿತರಿದ್ದರು.

ನಾಡಗೀತೆ ಹಾಡಿ, ಗ್ರಾ.ಪಂ ಕಾರ್ಯದರ್ಶಿ ಸ್ವಾಗತಿಸಿ, ಜಮಾ ಖರ್ಚುನ ಬಗ್ಗೆ ತಿಳಿಸಿದರು.

ಗ್ರಾ.ಪಂ ಸಿಬ್ಬಂದಿ ಮಧುಮಲ ವರದಿ‌ ಮಂಡಿಸಿದರು.

ಮೀನಾಕ್ಷಿ ವಾರ್ಡ್ ಸಭೆಯ ಬೇಡಿಕೆಗಳನ್ನು ತಿಳಿಸಿದರು.ಸಿಬ್ಬಂದಿಗಳು ಸಹಕರಿಸಿದರು‌.

Exit mobile version