ಕುವೆಟ್ಟು: ಕುವೆಟ್ಟು ಗ್ರಾಮ ಸಭೆಯು ಎಂದಿನಂತೆ ಫೆ.29ಕ್ಕೆ ನಿಗಧಿಯಾಗಿದ್ದು ಗ್ರಾಮ ಸಭೆಗೆ ಗ್ರಾಮಸ್ಥರ ಕೊರತೆ, ಮತ್ತು ಇಲಾಖಾಧಿಕಾರಿಗಳ ಗೈರು ಹಾಜರಿ ಎದ್ದು ಕಾಣುತ್ತಿದ್ದ ವಿಷಯ ಗ್ರಾಮ ಸಭೆಯಲ್ಲಿ ಗೋಪಿನಾಥ್ ನಾಯಕ್, ಪ್ರಭಾಕರ ಶೆಟ್ಟಿ ಉಪ್ಪಡ್ಕ ಪ್ರಸ್ತಾಪಿಸಿದರು.
ನಾಡಗೀತೆಯಾಗುತ್ತಿದಂತೆ ಗ್ರಾಮ ಪಂಚಾಯತ್ ರಾಷ್ಟ್ರೀಯ ಹೆದ್ದಾರಿ ಕಳಪೆ ಕಾಮಗಾರಿ ಶೇ.80ಕಾಮಗಾರಿ ನಿಲ್ಲಿಸಿದ್ದಾರೆ.ಇಡೀ ರಸ್ತೆ ದೂಳಿನಿಂದ ಕೂಡಿದೆ.ಗ್ರಾಮ ಸಭೆ 10.30ಕ್ಕೆ ನಿಗದಿಪಡಿಸಲಾಗಿದೆ. 12ಗಂಟೆಯಾದರೂ ಬಂದಿಲ್ಲ ಎಂದು ದೂರಿದರು.ಅಧಿಕಾರಿಗಳು ನಮಗಾಗಿ ಇರುವ ಅಧಿಕಾರಿಗಳು.ಅವರಿಗಾಗಿ ಇರುವುದಲ್ಲ.ಅಧಿಕಾರಿಗಳೇ ಇಲ್ಲದಿದ್ದರೆ ಗ್ರಾಮ ಸಭೆ ಯಾಕೆ? ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಹೈವೆ ರಸ್ತೆ ಹಾದು ಹೋಗುತ್ತದೆ.ಇಷ್ಟು ಸಮಸ್ಯೆಗಳು ಇದ್ದರೂ ಇಲಾಖಾಧಿಕಾರಿಗಳು ಇಲ್ಲದಿದ್ದರೆ ಯಾರು ಹೊಣೆ.ಸಮಸ್ಯೆಗಳಿಗೆ ಪಂಚಾಯತ್ ಆಡಳಿತ ಮಂಡಳಿಗೆ ಅವಮಾನ ಮಾಡಿದ್ದಾರೆ ಎಂದು ಗ್ರಾಮಸ್ಥರು ಹೇಳಿದರು.ಮತ್ತೆ ಕೋರಂ ಬಗ್ಗೆ ನೋಡುವಾಗ ಗ್ರಾಮ ಸಭೆಗೆ ಕೋರಂ ಕೂಡ ಇಲ್ಲವಾದಂತಾಯಿತು.ಅಭಿವೃಧಿಕಾರಿಯವರು ಮಾತನಾಡಿ ನಾವು ಎಲ್ಲ ಇಲಾಖೆಗಳಿಗೆ ಪತ್ರ ನೀಡಿದ್ದೇವೆ.ಗ್ರಾಮ ಸಭೆ ನೋಟಿಸ್, ಮೈಕ್ ಎನೌಸ್ಮೆಂಟ್ ಮಾಡಲಾಗಿದೆ ಎಂದರು.ನೋಡೆಲ್ ಅಧಿಕಾರಿ ಮಾತನಾಡಿ ಅಧಿಕಾರಿಗಳು ಗೈರು ಹಾಜರಿ ಬಗ್ಗೆ ನಿರ್ಣಯ ಕೈಗೊಂಡು ಮುಖ್ಯ ಕಾರ್ಯನಿರ್ವಣಾಧಿಕಾರಿಗೆ ಪತ್ರ ವ್ಯವಹಾರ ಮಾಡುವ ಬಗ್ಗೆ ತಿಳಿಸಿದರು. ಗ್ರಾಮ ಸಭೆ ರದ್ದು ಮಾಡುವುದು ಬೇಡ ಏನೇ ಇದ್ದರೂ ಚುರ್ಚಿಸುವ ಎಂದು ನೋಡೆಲ್ ಅಧಿಕಾರಿ ಜೋಸೆಫ್ ರವರು ಮನವಿ ಮಾಡಿದರು ನಡೆಸಲು ಬಿಟ್ಟಿಲ್ಲ.ಕೂಡಲೆ ಆಡಳಿತ ಮಂಡಳಿ ಸರ್ವಾನುಮತದಿಂದ ತೀರ್ಮಾನ ಕೈಗೊಂಡು ಅಧ್ಯಕ್ಷೆ ಭಾರತಿ ಶೆಟ್ಟಿ ಒಪ್ಪಿಗೆ ಪಡೆದು ಗ್ರಾಮ ಸಭೆ ರದ್ದು ಮಾಡಲಾಗಿದೆ ಎಂದು ಘೋಷಿಸಿದರು.
ಪಂಚಾಯತ್ ಅಧ್ಯಕ್ಷೆ ಭಾರತಿ ಎಸ್ ಶೆಟ್ಟಿ, ಹಿಂದುಳಿದ ಇಲಾಖೆಯ ಅಧಿಕಾರಿ ಜೋಸೆಫ್, ಮಾರ್ಗದರ್ಶಿ ಅಧಿಕಾರಿಯಾಗಿ ಭಾಗವಹಿಸಿದ್ದರು.
ಅಭಿವೃದ್ಧಿ ಅಧಿಕಾರಿ ಇಮ್ತಿಹಾಜ್, ಪಂಚಾಯತ್ ಉಪಾಧ್ಯಕ್ಷ ಗಣೇಶ್ ಕೆ., ಗ್ರಾಮ ಪಂಚಾಯತ್ ಸದಸ್ಯರು ಉಪಸ್ಥಿತರಿದ್ದರು.