Site icon Suddi Belthangady

ಉಜಿರೆ ಶ್ರೀ ಧ.ಮಂ.ಅ.ಹಿ.ಪ್ರಾ.ಶಾಲೆಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ

ಉಜಿರೆ: ಇಲ್ಲಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಅನುದಾನಿತ ಹಿರಿಯ ಪ್ರಾರ್ಥಮಿಕ ಶಾಲೆಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಮತ್ತು ಮಕ್ಕಳಿಂದ ನಿರ್ಮಿತವಾದ ವಿಜ್ಞಾನ ಮಾದರಿಗಳ ಪ್ರದರ್ಶನ ಕಾರ್ಯಕ್ರಮ ಇಂದು(ಫೆ.28) ಜರುಗಿತು.

ಎಸ್‌.ಡಿ.ಎಂ ಶಿಕ್ಷಣ ಮಹಾವಿದ್ಯಾಲಯ ಉಜಿರೆ ಇಲ್ಲಿನ ಉಪನ್ಯಾಸಕಿ ಆನುಷಾ ಡಿ.ಜೆ. ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು “ಯಾವುದೇ ಜ್ಞಾನ ಕೇವಲ ಅಂಕಗಳಿಕೆಗೆ ಸೀಮಿತವಾಗದೆ ಸಾಧನೆಗೆ ಕಾರಣವಾಗಬೇಕು.ವಿಜ್ಞಾನ ನಮ್ಮ ನಿತ್ಯಜೀವನದಲ್ಲಿ ಅಡಕವಾಗಿರುವ ಅಂಶ.ವಿದ್ಯಾರ್ಥಿಗಳು ಬಾಲ್ಯದಲ್ಲೇ ವೈಜ್ಞಾನಿಕ ಕೌಶಲವನ್ನು ಬೆಳೆಸಿಕೊಂಡಲ್ಲಿ, ಭವಿಷ್ಯದಲ್ಲಿ ಭಾರತದ ವೈಜ್ಞಾನಿಕ ಕ್ಷೇತ್ರಕ್ಕೆ ಅಮೋಘ ಕೊಡುಗೆಗಳನ್ನು ನೀಡಬಹುದು” ಎಂದು ತಿಳಿಸಿದರು.

‘ಯಾವುದೆ ದಿನಾಚರಣೆಯ ಉದ್ದೇಶ ಸಾಧಕರ ಪರಿಚಯ ಮಾಡುವುದು ಮಾತ್ರ ಅಲ್ಲ ಅವರ ಜೀವನ ಮತ್ತು ಸಾಧನೆಗಳು ಮಕ್ಕಳಿಗೆ ಪ್ರೇರಣೆಯಾಗಬೇಕು ಎಂಬುವುದು.ಆದೇ ರೀತಿ ಸಿ.ವಿ.ರಾಮನ್ ಅವರ ಸಾಧನೆಗಳು ನಿಮಗೆ ಪ್ರೇರಣೆಯಗಲಿ’ ಎಂದು ಹಾರೈಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ಶಾಲಾ ಮುಖ್ಯ ಶಿಕ್ಷಕ ಬಾಲಕೃಷ್ಣ  ನಾಯ್ಕ್ ಮಾತನಾಡಿ ಸಿವಿ ರಾಮನ್ ಅವರ ಜೀವನ ಮತ್ತು ಸಾಧನೆಗಳು ಮಕ್ಕಳಿಗೆ ಪ್ರೇರಣೆಯಾಗಬೇಕು ನೀವು ಅವರಂತೆ ಸಾಧನೆಗಳನ್ನು ಮಾಡಿ ತಂದೆ ತಾಯಿಗೂ ದೇಶಕ್ಕೂ ಶಾಲೆಗೂ ಹೆಸರು ತರುವಂತ ಮಾಡಿ ಎಂದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

Exit mobile version