ಬೆಳ್ತಂಗಡಿ: ಮಾರ್ಚ್ 1ರಿಂದ ಗ್ರಾಮ ಪಂಚಾಯತ್ ನೌಕರರ ವಿವಿಧ ಬೇಡಿಕೆ ಈಡೇರಿಕೆಗೆ ಕೈಗೆ ಕಪ್ಪು ಪಟ್ಟಿ ಧರಿಸಿ ವಿಭಿನ್ನ ಪ್ರತಿಭಟನೆ ಗ್ರಾಮ ಪಂಚಾಯತ್ ನೌಕರರ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಕೈಗೆ ಕಪ್ಪು ಪಟ್ಟಿ ಧರಿಸಿ ವಿಭಿನ್ನ ಪ್ರತಿಭಟನೆ ಮಾರ್ಚ್ 1ರಿಂದ ನಡೆಯಲಿದೆ.
ಗ್ರಾಮ ಪಂಚಾಯತ್ ನೌಕರರ ಮಹತ್ವದ ಬೇಡಿಕೆಗಳಾದ ಆರೋಗ್ಯ ಭದ್ರತೆ ಮತ್ತು ಸಿ ಮತ್ತು ಡಿ ದರ್ಜೆ ಸ್ಥಾನ ಮಾನ ನೀಡುವಂತೆ ಸರಕಾರವನ್ನು ಆಗ್ರಹ ಪಡಿಸಲು ರಾಜ್ಯದಲ್ಲಿ ಹೋರಾಟ ನಡೆಯಲಿದೆ.
ತಾಲೂಕಿನ ಎಲ್ಲಾ ಪಂಚಾಯತ್ ಸಿಬ್ಬಂದಿಗಳು ಕೂಡ ಈ ಹೋರಾಟದಲ್ಲಿ ಭಾಗವಹಿಸಲಿದ್ದಾರೆ ಎಂದು ತಾಲೂಕು ಗ್ರಾಮ ಪಂಚಾಯತ್ ನೌಕರರ ಶ್ರೇಯಾಭಿವೃದ್ಧಿ ಸಂಘದ ಅಧ್ಯಕ್ಷ ಸತೀಶ್ ನಾರಾವಿ ಪತ್ರಿಕಾ ಹೇಳಿಕೆ ಮೂಲಕ ತಿಳಿಸಿದರು.